spot_img
Saturday, December 7, 2024
spot_img

ತೆಕ್ಕಟ್ಟೆ ಹಯಗ್ರೀವದಲ್ಲಿ ಆಷಾಡದಲ್ಲೊಂದು ‘ಚಿಂತನ – ಮಂಥನ’ ಸಂವಾದ

ತೆಕ್ಕಟ್ಟೆ: ಶಾಲಾ ಪಠ್ಯ ಪುಸ್ತಕಗಳನ್ನು ರಂಗಭೂಮಿಯಲ್ಲಿ ಅಳವಡಿಸಿದರೆ ಅನುಭವಜನ್ಯ ಚಟುವಟಿಕೆಗಳಾಗುತ್ತದೆ. ಕಲಾ ಮಾಧ್ಯಮವನ್ನು ಶಾಲೆಯಲ್ಲಿ ಚುರುಕುಗೊಳಿಸದರೆ ಪಂಚೇಂದ್ರಿಯಗಳಿಗೆ ಕೆಲಸ ಸಿಗುತ್ತದೆ. ಬರೇ ಓದು ಜೀವನವನ್ನು ಕಟ್ಟಿ ಕೊಡದು. ಲಡಾಕ್, ಉತ್ತರಕಾಂಡ, ಕರ್ನಾಟಕಗಳ ಬಗ್ಗೆ ಒಂದಿಷ್ಟು ತಿಳಿಯುವುದಕ್ಕೆ ರಂಗ ಪಠ್ಯಗಳು ಪೂರಕವಾಗುತ್ತದೆ. ಶಿಕ್ಷಣದಲ್ಲಿ ಪ್ರತಿಯೊಂದು ಮಗುವಿಗೂ ಒಂದು ಕಲಾ ಪ್ರಕಾರದಲ್ಲಿ ಆಸಕ್ತಿಯನ್ನು ಹುಟ್ಟಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಜೀವನದಲ್ಲಿ ಏಳ್ಗೆಯನ್ನು ಕಂಡುಕೊಳ್ಳಬೇಕಾದರೆ ಮಕ್ಕಳು ಕಲಾ ಪ್ರಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಷಾಡದಲ್ಲೊಂದು ಚಿಂತನ – ಮಂಥನ ’ಸಂವಾದ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಶ್ರೀಮತಿ ಅಭಿಲಾಷ ಎಸ್. ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ’ಸಿನ್ಸ್ 1999 ಶ್ವೇತಯಾನ-42’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ಜುಲೈ 17ರಂದು ರಸರಂಗ (ರಿ.) ಕೋಟ ಸಾದರ ಪಡಿಸಿದ ’ಕಲೆ ಮತ್ತು ಶಿಕ್ಷಣ’ಕ್ಕೆ ಸಂಬಂಧಿಸಿ ಸಂವಾದ ಕಾರ್ಯಕ್ರಮವನ್ನು ಎಲ್ಲಾ ಸಂವಾದಕ ಗಣ್ಯರೂ ರಂಗಭೂಮಿಯ ವಿವಿಧ ವಾದ್ಯ ಪರಿಕರವನ್ನು ಉದ್ಘಾಟಿಸಿ ಸಂವಾದದಲ್ಲಿ ತೊಡಗಿಕೊಂಡರು.

ಯಕ್ಷಗಾನ ರಂಗಭೂಮಿಗೆ ಕುರಿತಾಗಿ ಕೃಷ್ಣಮೂರ್ತಿ ಉರಾಳ, ಶಿಕ್ಷಣಕ್ಕೆ ಸಂಬಂಧಿಸಿದಂತೆ, ಸುಧಾ ಆಡುಕುಳ, ಅಭಿಲಾಷ ಎಸ್., ನರೇಂದ್ರಕುಮಾರ್ ಕೋಟ, ರಾಘವೇಂದ್ರ ತುಂಗ ಕೋಟ ಸಂವಾದವನ್ನು ಮಾಡಿದರು. ರಂಗಭೂಮಿಯ ಕುರಿತಾಗಿ ರಘು ಪಾಂಡೇಶ್ವರ, ಶ್ರೀಷ ತೆಕ್ಕಟ್ಟೆ ಮಾತನ್ನಾಡಿದರು. ಜಾನ್ಹವಿ ಹೇರ್ಳೆ ಸಂಪ್ರದಾಯದ ಹಾಡುಗಳ ಕುರಿತಾಗಿ ವಿಶ್ಲೇಷಿಸಿದರು. ಸಮನ್ವಯಕಾರರಾಗಿ ಡಾ. ಪ್ರದೀಪ ವಿ. ಸಾಮಗ ಭಾಗವಹಿಸಿದ್ದರು. ಸುಧಾ ಕದ್ರಿಕಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!