spot_img
Saturday, December 7, 2024
spot_img

ರಂಗಭೂಮಿ ಕಲಾವಿದ, ಸಿನೆಮಾ ನಿರ್ಮಾಪಕ ಸದಾನಂದ ಸುವರ್ಣ ಅಸ್ತಂಗತ

ಜನಪ್ರತಿನಿಧಿ (ಬೆಂಗಳೂರು) : ರಂಗಕರ್ಮಿ, ಸಿನಿಮಾ ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ಸದಾನಂದ ಸುವರ್ಣ ಇಂದು (ಜು.16) ನಿಧನರಾಗಿದ್ದಾರೆ. 93ನೇ ವರ್ಷಅ ಅವರು ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಮುಲ್ಕಿಯವರಾದ ಅವರು ರಂಗಭೂಮಿ, ಸಿನೆಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

‘ಘಟಶ್ರಾದ್ಧ’ ಸಿನಿಮಾ ಮೂಲಕ ಸದಾನಂದ ಸುವರ್ಣ ನಿರ್ಮಾಪಕರಾಗಿದ್ದರು. ನಿರ್ಮಿಸಿದ ಮೊದಲ ಘಟಶ್ರಾದ್ಧ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು.

ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಕುಬಿ ಮತ್ತು ಇಯಾಲ, ತಬರನ ಕಥೆ ಸಿನಿಮಾಗಳಿಗೆ ಸದಾನಂದ ಸುವರ್ಣ ಕಾರ್ಯನಿರ್ವಾಹಕ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ದೂರದರ್ಶನಕ್ಕೆ ‘ಗುಡ್ಡದ ಭೂತ’ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು.

ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಸೇವೆ ಅಲ್ಲಿಸಿದ್ದ ಅವರು, ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್‌ ಮಾರ್ಷಲ್‌, ಉರುಳು ಮೊದಲಾದ ಜನಪ್ರಿಯ ನಾಟಕ ರಚಿಸಿದ ಹೆಗ್ಗಳಿಕೆಯೂ ಅವರಿಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!