Saturday, September 14, 2024

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್: ಜು.17ರಂದು ವಾರ್ಷಿಕ ಅಧಿವೇಶನ, 101ನೇ ವಿಪ್ರವಾಣಿ ಬಿಡುಗಡೆ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ರಿ., ಕುಂದಾಪುರ ವಲಯ ಇದರ ವಾರ್ಷಿಕ ಅಧಿವೇಶನ-101ನೇ ವಿಪ್ರವಾಣಿ ಬಿಡುಗಡೆ, ಮಹಾಸಭೆ, ಧಾರ್ಮಿಕ ಕಾರ್ಯಕ್ರಮ-ಗಣಹೋಮ, ವಿಷ್ಣು ಸಹಸ್ರನಾಮ ಪಾರಾಯಣ ಜು.17 ಬುಧವಾರ ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ1 ಗಂಟೆಯ ತನಕ ಕುಂದಾಪುರದ ಹಂಗಳೂರು ಶ್ರೀ ಕೃಷ್ಣ ಸಭಾಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ದ್ರಾವಿಡ ಬ್ರಾಹ್ಮಣ ಪರಿಷತ್ ಕುಂದಾಪುರ ವಲಯ ಅಧ್ಯಕ್ಷರಾದ ಜಿ.ಎಸ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿಗಳು ಕೊರಂಗ್ರಪಾಡಿ ಉಡುಪಿ ಉದ್ಘಾಟಿಸಲಿದ್ದಾರೆ. ವಿಪ್ರವಾಣಿಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ.ಕೆ.ಎಸ್ ಕಾರಂತ ಬಿಡುಗಡೆ ಮಾಡಲಿದ್ದಾರೆ.

ತಾಲೂಕು ಮಟ್ಟದಲ್ಲಿ ನಡೆದ ವಿಪ್ರ ಕ್ರೀಡೋತ್ಸವದಲ್ಲಿ ವಿಪ್ರ ಟ್ರೋಫಿ-2024 ಚಾಂಪಿಯನ್ ಶಿಫ್ ಪಡೆದ ವಿಪ್ರ ಕ್ರಿಕೆಟ್ ತಂಡ ಹಾಗೂ ಮಹಿಳಾ ತ್ರೋಬಾಲ್ ತಂಡದವರನ್ನು ಅಭಿನಂದಿಸಲಾಗುವುದು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಕುಂದಾಪುರದ ನೇತ್ರ ತಜ್ಞರಾದ ಡಾ.ವಿ.ನರಸಿಂಹ ಹೊಳ್ಳ, ಸಂಗೀತ ಕ್ಷೇತ್ರದಲ್ಲಿ ಸಂಗೀತ ವಿದೂಷಿ ಶ್ರೀಮತಿ ನಳಿನಿ ವಿ.ರಾವ್, ಸಮಾಜಸೇವಕ ಕೆ.ರಾಮಕೃಷ್ಣ ಕಾರಂತ ಹೊಳೆಬದಿ, ಕುಂದಾಪುರ, ಪಾಕಶಾಸ್ತ್ರದಲ್ಲಿ ಯು.ಸದಾಶಿವ ಮೇಲಾಡಿ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಗುವುದು. ಎ.ಜಿ.ಮಾಧವ ನಾವಡ, ಜ್ಯೋತಿಷಿಗಳು, ನಾವಡರಕೇರಿ ಕುಂದಾಪುರ ಇವರಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!