Saturday, October 12, 2024

ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ನಡೆಸುವವರು ʼಸಂವಿಧಾನ ಹತ್ಯಾ ದಿವಸ್‌ʼ ಆಚರಿಸುವುದರಲ್ಲಿ ಅಚ್ಚರಿ ಏನಿದೆ ? : ಪ್ರಿಯಾಂಕಾ

ಜನಪ್ರತಿನಿಧಿ (ನವ ದೆಹಲಿ) : ಸಂವಿಧಾನವನ್ನು ವಿರೋಧಿಸಿ ಹಾಗೂ ಅದನ್ನು ನಾಶಗೊಳಿಸಲು ಕರೆ ನೀಡುವವರು ʼಸಂವಿಧಾನ ಹತ್ಯಾ ದಿವಸ್‌ʼ ಆಚರಿಸುವ ಮೂಲಕ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿರುವುದರಲ್ಲಿ ಅಚ್ಚರಿಯಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ.

1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಧಿಕಾರದ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಗೌರವ ಸಲ್ಲಿಸಲು ಜೂನ್‌ 25ರಂದು ʼಸಂವಿಧಾನ ಹತ್ಯಾ ದಿವಸ್‌ʼ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿನ್ನೆ(ಶುಕ್ರವಾರ) ಘೋಷಣೆ ಮಾಡಿತ್ತು.

ಈ ಬಗ್ಗೆ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ʼಎಕ್ಸ್ʼ ನಲ್ಲಿ ಟೀಕಿಸಿರುವ ಪ್ರಿಯಾಂಕಾ, ದೇಶದ ಮಹಾನ್‌ ವ್ಯಕ್ತಿಗಳು ತಮ್ಮ ಐತಿಹಾಸಿಕ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಹಾಗೂ ಸಂವಿಧಾನ ರಚಿಸಿದ್ದಾರೆ. ಸಂವಿಧಾನ ರಚಿಸಿದವರು ಹಾಗೂ ಅದರ ಮೇಲೆ ನಂಬಿಕೆ ಹೊಂದಿರುವವರು ಮಾತ್ರ ಸಂವಿಧಾನ ರಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಸಂವಿಧಾನದ ಅನುಷ್ಠಾನವನ್ನು ವಿರೋಧಿಸುವವರು, ಸಂವಿಧಾನದ ಪರಿಶೀಲನೆಗೆ ಆಯೋಗ ರಚಿಸುವವರು ಮತ್ತು ಅದನ್ನು ನಾಶಗೊಳಿಸಲು ಕರೆ ನೀಡುವವರು, ತಮ್ಮ ನಿರ್ಧಾರಗಳು ಹಾಗೂ ಕಾರ್ಯಗಳ ಮೂಲಕ ಪದೇ ಪದೇ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ನಡೆಸುವವರು ʼಸಂವಿಧಾನ ಹತ್ಯಾ ದಿವಸ್‌ʼ ಎಂದು ಆಚರಿಸುವ ಮೂಲಕ ನಕಾರಾತ್ಮಕ ರಾಜಕಾರಣದಲ್ಲಿ ತೊಡಗಿದ್ದಾರೆ. ಇದರಲ್ಲಿ ಅಚ್ಚರಿ ಏನಿದೆ ? ಎಂದು ಪ್ರಿಯಾಂಕ ಹೇಳಿದ್ದಾರೆ.

ʼಸಂವಿಧಾನ ಹತ್ಯಾ ದಿವಸ್‌ʼ ಘೋಷಣೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌ ಜೂನ್‌ 4ನ್ನು ʼಮೋದಿ ಮುಕ್ತಿ ದಿವಸ್‌ʼ ಎಂದು ಆಚರಿಸಬೇಕೆಂದು ಆಕ್ರೋಶ ವ್ಯಕ್ತ ಪಡಿಸಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!