spot_img
Wednesday, February 19, 2025
spot_img

ರಾಜ್ಯ ತಂಡ ಪ್ರತಿನಿಧಿಸುವ ಆಲೂರು ಶಾಲೆ ವಿದ್ಯಾರ್ಥಿ ನಿತೇಶ್‌ಗೆ ನಗದು ಪುರಸ್ಕಾರ

ಆಲೂರು: HCL ಫೌಂಡೇಶನ್ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇಲ್ಲಿನ ವಿದ್ಯಾರ್ಥಿ ನಿತೇಶ್ ಜೆ ಪೂಜಾರಿ ಇವನು ಟ್ರಯಥ್ಲಾನ್ (60 ಮೀಟರ್ ಓಟ, ಉದ್ದ ಜಿಗಿತ, ಬಾಲ್ ತ್ರೋ) ವಿಭಾಗದಲ್ಲಿ ತಮಿಳುನಾಡಿನ ಚೆನ್ನೈಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಈ ವಿದ್ಯಾರ್ಥಿಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘ ಆಲೂರು ಮತ್ತು ರಘುರಾಮ ದೇವಾಡಿಗ ಮತ್ತು ಬಳಗದವರು ಶಾಲೆಗೆ ಆಗಮಿಸಿ ನಗದು ಪುರಸ್ಕಾರವನ್ನು ನೀಡಿ ಸನ್ಮಾನಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಆಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್. ಮಂಜಯ್ಯ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಹೊನ್ನಳ್ಳಿ, ಬ್ಯಾಂಕಿನ ಮ್ಯಾನೇಜರ್ ಸಂಜೀವ ಪೂಜಾರಿ, ಉದ್ಯಮಿಗಳಾದ ತೇಜ ಪೂಜಾರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ ಶೆಟ್ಟಿ, ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಮುಖ್ಯಶಿಕ್ಷಕರಾದ ಲೀನಾ ಕಾರ್ಡಿನ್ ಹಾಗೂ ದೈಹಿಕ ಶಿಕ್ಷಕರಾದ ವೀರೇಂದ್ರ ಜೋಗಿ, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!