Sunday, September 8, 2024

ಕುಂದಾಪುರ: ಮರಗಳಿಗೆ ಸೀರೆ ಉಡಿಸುವ ಮೂಲಕ ಪರಿಸರ ಸಂರಕ್ಷಣೆ ಸಂದೇಶ

ಕುಂದಾಪುರ: ಪ್ರಕೃತಿ ಮಾತೆಯು ನಮಗೆ ತಾಯಿ ಇದ್ದಂತೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರವನ್ನು ಉಳಿಸುವ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪ್ರಕೃತಿಯನ್ನು ತಾಯಿ ಅಥವಾ ನಮ್ಮ ಹೆಣ್ಮಗಳ ಪ್ರತೀಕವಾಗಿ ಕಂಡಾಗ, ತಾಯಿಗೆ ಕೊಡುವ ಗೌರವವನ್ನು ಪ್ರಕೃತಿಗೆ ಕೊಟ್ಟಾಗ ಪರಿಸರವನ್ನು ರಕ್ಷಿಸಲು ಸಾಧ್ಯ ಎಂದು ಜೆಸಿ‌ಐ ಸಿಟಿ ಕುಂದಾಪುರ ಇದರ ನಿಕಟ ಪೂರ್ವ ಅಧ್ಯಕ್ಷ ಡಾ. ಸೋನಿ ಹೇಳಿದರು.

ಅವರು ಬುಧವಾರ ಸಂಜೆ ಕುಂದಾಪುರದಲ್ಲಿ ಕುಂದಾಪುರ ಸಿಟಿ ಜೆ ಸಿ ಐ ಲೇಡಿ ಜೆಸಿ ವಿಂಬಗ್ ಕುಂದಾಪುರ ಇದರ ವತಿಯಿಂದ ಆಯೋಜಿಸಿದ ಪ್ರೊಟೆಕ್ಟ್ ನೇಚರ್ ಇಸ್ ಮೈ ಕಲ್ಚರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮರಗಳಿಗೆ ಸೀರೆ ಉಡಿಸಿ, ಮಹಿಳೆಯ ಮುಖವಾಡ ಹಾಕಿ ಹೆಣ್ಮಕ್ಕಳನ್ನು ಸಿಂಗರಿಸಿದಂತೆ ಸಿಂಗರಿಸಿ, ಪ್ರಕೃತಿ ಮಾತೆಗೆ ನಮಿಸಲಾಯಿತು. ಅಲ್ಲದೇ ಪರಿಸರ ಉಳಿಸುವ ಪ್ರಮಾಣವಚನ ಸ್ವೀಕರಿಸಲಾಯಿತು. ಈ ಸಂದರ್ಭ ಸಿಟಿ ಜೆ ಸಿ ಐ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ಥಾಪಕಾ ಅಧ್ಯಕ್ಷ ಹುಸೇನ್ ಹೈಕಾಡಿ, ಲೇಡಿ ಜೆಸಿ ವಿಂಗ್ ಕುಂದಾಪುರ ಇದರ ಅಧ್ಯಕ್ಷೆ ರೇಷ್ಮಾ ಕೋಟ್ಯಾನ್, ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಸಿಂಚನ ಡಿಕೆ, ಇಂದಿರಾ, ರಿಷಿತಾ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!