spot_img
Saturday, December 7, 2024
spot_img

ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ದ್ವಿಚಕ್ರ ವಾಹನ ನಿಲುಗಡೆಯ ಶೆಡ್ ಕೊಡುಗೆ

ಕುಂದಾಪುರ: ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಕುಂದಾಪುರ ಉಡುಪಿ ಜಿಲ್ಲೆ ಇಲ್ಲಿನ 2023-24 ನೇ ಶೈಕ್ಷಣಿಕ ವರ್ಷದ ಅಂತಿಮ ಪದವಿ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿಗಳ ಉಪಯೋಗಕ್ಕೆ ದ್ವಿಚಕ್ರ ವಾಹನ ನಿಲುಗಡೆಯ ಶೆಡ್‌ನ್ನು ಅಂದಾಜು ರೂ. 50000 ವೆಚ್ಚದಲ್ಲಿ ನಿರ್ಮಿಸಿ ಕಾಲೇಜಿಗೆ ಕೊಡುಗೆ ನೀಡಿದ್ದಾರೆ.

ಅರಣ್ಯ ಗುತ್ತಿಗೆದಾರರು ಹಾಗೂ ಶಿಕ್ಷಣ ಪ್ರೇಮಿಗಳಾದ ಜೆ.ಪಿ. ಶೆಟ್ಟಿ ಕಟ್ಕೆರೆ ಇವರು ಉದ್ಘಾಟಿಸಿ ವಿದಾರ್ಥಿಗಳ ಈ ಕೊಡುಗೆ ಮೆಚ್ಚುವಂತದ್ದು ಹಾಗೂ ತಾವು ಕಲಿತ ಸಂಸ್ಥೆಗೆ ನೀಡಿದ ಅಭಿಮಾನದ ಗೌರವ ಎಂದು ಶ್ಲಾಘಿಸಿದರು.

ಮೂರು ವರ್ಷಗಳವರೆಗೆ ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ತಮ್ಮ ನೆನಪನ್ನು ಸ್ಮರಣೀಯಗೊಳಿಸುವ ಭಾವನಾತ್ಮಕ ಸಂದರ್ಭವನ್ನು ಬೆಸೆಯುವ ಉದ್ದೇಶವನ್ನು ಹೊತ್ತು ನೀಡಿರುವ ವಿದ್ಯಾರ್ಥಿಗಳ ಈ ಕೊಡುಗೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಹಾಗೂ ಬೋಧಕ-ಬೋಧಕೇತರ ಸಿಬ್ಬಂಧಿ ವರ್ಗ ಅತ್ಯಂತ ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದಾರೆ .

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!