Wednesday, September 11, 2024

ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ʼಇಂಡಿಯಾʼ ಮೈತ್ರಿಕೂಟ ಧ್ವನಿ ಎತ್ತಲಿದೆ : ರಾಗಾ

ಜನಪ್ರತಿನಿಧಿ (ನವದೆಹಲಿ) : ಸಂಘರ್ಷದಿಂದ ನಲುಗಿರುವ ಮಣಿಪುರ ವಿಚಾರದ ಬಗ್ಗೆ ಸಂಸತ್ತಿನಲ್ಲಿ ‘ಇಂಡಿಯಾ’ ಮೈತ್ರಿಕೂಟ ಧ್ವನಿ ಏರಿಸಲಿದೆ. ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಪ್ರಸ್ತಾಪ ಎತ್ತುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ನೆಲೆಸಲು ಸಂಪೂರ್ಣವಾಗಿ ಪ್ರಯತ್ನಿಸಲಾಗುವುದು ಎಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು(ಗುರುವಾರ) ಭರವಸೆ ನೀಡಿದ್ದಾರೆ.

ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಭೇಟಿ ನೀಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಬೇಕೆಂದು ಎಂದು ರಾಹುಲ್ ಪುನರುಚ್ಚರಿಸಿದರು.

ವಿಪಕ್ಷ ನಾಯಕನಾದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್ ಮಣಿಪುರಕ್ಕೆ ಈಚೆಗೆ ಭೇಟಿ ನೀಡಿದ್ದರು. ಮಣಿಪುರದ ಸಂತ್ರಸ್ತರೊಂದಿಗೆ ಸಂವಾದ ಮಾಡಿದ ವಿಡಿಯೊವನ್ನು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್‌ ಗಾಂಧಿ  ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ, ಸಂತ್ರಸ್ತರ ಶಿಬಿರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳೊಂದಿಗೆ ಹಾಗೂ ಮೈತೇಯಿ ಹಾಗೂ ಕುಕಿ ಸಮುದಾಯಗಳ ಪ್ರಮುಖರೊಂದಿಗೆ ಸಂವಾದ ನಡೆಸಿದ್ದಾರೆ.

‘ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗಿಂದಲೂ ನಾನು ಮೂರು ಬಾರಿ ಭೇಟಿ ನೀಡಿದ್ದಾನೆ. ಆದರೆ ಇಲ್ಲಿನ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇಂದಿಗೂ ರಾಜ್ಯವು ಎರಡು ಭಾಗವಾದಂತೆ ಕಂಡು ಬಂದಿದೆ. ಇಲ್ಲಿನ ಮನೆಗಳು ಸುಟ್ಟು ಹೋಗಿವೆ. ಅಮಾಯಕ ಜೀವಗಳು ಅಪಾಯದಲ್ಲಿದೆ. ಸಾವಿರಾರೂ ಕುಟುಂಬಗಳು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ’ ಎಂದು ರಾಹುಲ್ ದುಃಖ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!