Saturday, October 12, 2024

ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ| ಅಗತ್ಯ ತುರ್ತು ಕ್ರಮ, ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

ಬೈಂದೂರು : ಬೈಂದೂರು ಕ್ಷೇತ್ರದ ಹಲವು ಭಾಗಗಳಲ್ಲಿ ನೆರೆ, ನೆರೆಭೀತಿ ಎದುರಾಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆಯಿಂದಾಗಿ ಇಡೀ ತಾಲೂಕಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿದೆ. ಅನೇಕರ ಮನೆಗೆ ನೀರು ನುಗ್ಗಿದೆ. ತೋಟಗಳಿಗೆ ಹಾನಿಯಾಗಿದೆ. ರಸ್ತೆ ಕುಸಿದಿದೆ. ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿ, ಪ್ರವಾಹ, ನೆರೆ ವಾತಾವರಣ ಸೃಷ್ಟಿಯಾಗಿದೆ.

ಬೈಂದೂರು ತಾಲೂಕಿನ ತಲ್ಲೂರು ಕೋಟೆ ಬಾಗಿಲು ಬೈಲ್ ಮನೆ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ನೆರೆಹಾವಳಿಯಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತದೆ. ಪ್ರತಿ ಬಾರಿ ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಜನತೆಯ ಸಮಸ್ಯೆಯನ್ನು ಈ ಬಾರಿ ಸ್ವತಃ ಶಾಸಕರೇ ಅನುಭವಕ್ಕೆ ತಂದುಕೊಂಡಿದ್ದಾರೆ. ರಸ್ತೆಯನ್ನೇ ಕಾಣದ ಹಾಗೂ ಇದುವರೆಗೂ ಯಾವ ಶಾಸಕರು ಕಾಲು ಹಾಕದ ಈ ಪ್ರದೇಶಕ್ಕೆ ಗುರುರಾಜ್ ಗಂಟಿಹೊಳೆಯವರು ಖುದ್ದು ಭೇಟಿ ಮಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಜನರು ತಮ್ಮ ಸಮಸ್ಯೆಗಳನ್ನು ಮನ ಬಿಚ್ಚಿ ಶಾಸಕರಲ್ಲಿ ತೋಡಿಕೊಂಡಿದ್ದಾರೆ.

ವಂಡ್ಸೆ ಗ್ರಾಮದ ಕೊಳ್ಕೆಗದ್ದೆ ಗೋವಿಂದ ಮೊಗವೀರರವರ ಮನೆಗೆ ನೀರು ನುಗ್ಗಿದ ಪರಿಣಾಮ ಶಾಸಕರಿಗೆ ಕರೆ ಮಾಡಿದ್ದರು, ತಕ್ಷಣವೇ ಶಾಸಕರು ಅಲ್ಲಿಗೆ ಭೇಟಿ ನೀಡಿ, ಸ್ಥಳಕ್ಕೆ ತಹಶೀಲ್ದಾರ್ ಅವರನ್ನು ಕರೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಸೂಚಿಸಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಪ್ರಮುಖರಾದ ವಂಡ್ಸೆ ದೀಪಕ್ ಶೆಟ್ಟಿ, ಕರಣ್ ಪೂಜಾರಿ, ಲಕ್ಷ್ಮೀರಾಜ್ ತಲ್ಲೂರು ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!