spot_img
Tuesday, March 31, 2026
spot_img

ಖಿದ್ಮಾ ಫೌಂಡೇಶನ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲುಗಳ ವಿತರಣೆ

ಕುಂದಾಪುರ: ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಘಟಕದ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ ಅಧ್ಯಕ್ಷರಾದ ಶೇಖ್ ಅಬು ಮುಹಮ್ಮದ್ ಕುಂದಾಪುರರವರ ಅಧ್ಯಕ್ಷತೆಯಲ್ಲಿ ಹಣ್ಣು ಹಂಪಲುಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಅಹ್ಮದ್ ಸವೋದ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೌಲಾನಾ ಝಮೀರ್ ಅಹ್ಮದ್ ರಶಾದಿರವರು ಸ್ವಾಗತಿಸುತ್ತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಪ್ರಾಸ್ತಾವಿಕ ಭಾಷಣದಲ್ಲಿ ತ್ಯಾಗ ಬಲಿದಾನದ ಮಹತ್ವದ ಬಗ್ಗೆ ವಿವರಿಸಿದರು.

ಮುಖ್ಯ ಅತಿಥಿಗಳಾದ ತಾಲೂಕು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇದರ ಆಡಳಿತಾಧಿಕಾರಿ ಡಾ. ವೀಣಾ, ಸಹಬಾಳ್ವೆ ಕುಂದಾಪುರ ಸಂಚಾಲಕ ರಾಮಕೃಷ್ಣ ಹೇರ್ಳೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇಲ್ಲಿನ ವೈದ್ಯಾಧಿಕಾರಿ ಡಾ. ನಾಗೇಶ್, ಪುರಸಭೆ ಸದಸ್ಯ ಜನಾಬ್ ಮುಜಾವರ್ ಅಬು ಮುಹಮ್ಮದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜಾಮಿಯಾ ಮಸೀದಿ ಕುಂದಾಪುರ ಅಧ್ಯಕ್ಷರಾದ ಜನಾಬ್ ವಸೀಮ್ ಬಾಷಾ, ಖಿದ್ಮಾ ಫೌಂಡೇಶನ್, ರಿಯಾದ್ ಅಧ್ಯಕ್ಷರಾದ ಜನಾಬ್ ಅಬ್ದುಸ್ಸಲಾಮ್ ಗಂಗೊಳ್ಳಿ, ವಾಯ್ಸ್ ಚೇರ್ಮೆನ್, ಖಿದ್ಮಾ ಫೌಂಡೇಶನ್, ರಿಯಾದ್ ಜನಾಬ್ ಶೇಖ್ ಮುಹಮ್ಮದ್ ಹನೀಫ್ ಬಸ್ರೂರು, ಡಾ. ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಸ್ಗರ್ ಅಲಿ ಕುಂದಾಪುರ, ಹನೀಫ್ ಜಮೇದಾರ್, ನಸ್ರುಲ್ಲಾ ಕಿರಿಮಂಜೇಶ್ವರ, ಬಿ. ಹೆಚ್. ಸೈಪುದ್ದೀನ್, ಇಬ್ರಾಹಿಂ ಬೆದ್ರೆ, ಅಬ್ದುಲ್ ರೆಹಮಾನ್ ಶಿರೂರು, ಎನ್. ಎಸ್. ರಿಜ್ವಾನ್, ಎನ್. ಎಸ್. ಇರ್ಫಾನ್ ನಾಗೂರು, ಅಸ್ಲಮ್ ತಲ್ಲೂರು ಮತ್ತು ಇತರರು ಉಪಸ್ಥಿತರಿದ್ದರು. ಮುಹಮ್ಮದ್ ಇಲ್ಯಾಸ್ ಬೈಂದೂರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!