Sunday, September 8, 2024

NEET-UG 2024 ಅಕ್ರಮ : ಎನ್‌ಟಿಎ, ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

ಜನಪ್ರತಿನಿಧಿ (ನವದೆಹಲಿ) : NEET-UG 2024 ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇಂದು(ಸೋಮವಾರ) ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ”ಪರೀಕ್ಷೆಯ ಪಾವಿತ್ರ್ಯತೆ ಹಾಳಾದರೆ ಮರು ಪರೀಕ್ಷೆಗೆ ಆದೇಶಿಸಬೇಕು” ಎಂದು ಸುಪ್ರೀಂ ಹೇಳಿದೆ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜುಲೈ 11ಕ್ಕೆ ವಿಚಾರಣೆ ಮುಂದೂಡಿದೆ. ಜುಲೈ 11ರಂದು ಅಂತಿಮ ವಿಚಾರಣೆ ನಡೆಯಲಿದ್ದು, ಅಂದಿನ ತೀರ್ಪು ಮಹತ್ವ ಪಡೆದಿದೆ.

‌ಈ ಬಗ್ಗೆ ತೀರ್ಪು ನೀಡಿದ ಸಿಜೆಐ ಡಿ. ವೈ ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ, ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಹಾಗೂ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದೆ. ಹಾಗೆಯೇ, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮದ ಕುರಿತಂತೆ ಮಹತ್ವದ ಮಾಹಿತಿ ನೀಡಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೀಟ್‌ ಮೂರು ನಿರ್ದೇಶನಗಳನ್ನು ನೀಡಿದೆ. ಹಾಗೆಯೇ, ತನಿಖೆಯ ವರದಿ ನೀಡಬೇಕು ಎಂಬುದಾಗಿ ಸಿಬಿಐಗೂ ಸುಪ್ರೀಂ ಕೋರ್ಟ್‌ ಸೂಚಿಸಿದೆ.

”ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಯಾವಾಗ ಎಂಬುದರ ಮಾಹಿತಿ ಕೊಡಿ. ಯಾವ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬುದರ ಮಾಹಿತಿ ಪ್ರತ್ಯೇಕವಾಗಿ ಇರಲಿ. ಪ್ರಶ್ನೆಪತ್ರಿಕೆ ಸೋರಿಕೆಯಾದ ದಿನ ಹಾಗೂ ಪರೀಕ್ಷೆ ನಡೆದ ದಿನದ ನಡುವೆ ಎಷ್ಟು ಸಮಯದ ಅಂತರವಿತ್ತು ಎಂಬುದರ ಮಾಹಿತಿ ಕೊಡಿ ಎಂದು ಎನ್‌ಟಿಎ ಅನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಅಕ್ರಮ ನಡೆದಿರುವುದು ನೋಡಿದರೆ ನೀಟ್‌ ಪರೀಕ್ಷೆಯ ಘನತೆ, ಮೌಲ್ಯಕ್ಕೆ ಧಕ್ಕೆಯಾಗಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ನಮಗೆ ಎನ್‌ಟಿಎ ಹಾಗೂ ಸಿಬಿಐ ನಿಖರ ಮಾಹಿತಿ ನೀಡಬೇಕು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ದುರ್ಬಳಕೆ ಮತ್ತು ವಂಚನೆ ಮುಂತಾದ ಕಾರಣಗಳಿಗಾಗಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರುತ್ತಿದ್ದೇವೆ ಎಂದು ವಾದ ಮಂಡಿಸಿದರು.

ಸಿಬಿಐಗೆ ಗಡುವು ನೀಡಿದ ಸುಪ್ರೀಂ ಕೋರ್ಟ್‌ :
ಈ ಸಂದರ್ಭದಲ್ಲೇ ಈ ವರೆಗಿನ ತನಿಖಾ ವರದಿ ಮತ್ತು ಸೋರಿಕೆ ವಿವರ ಸಲ್ಲಿಸುವಂತೆ ಸಿಬಿಐ ಹಾಗೂ ಎನ್‌ಟಿಎಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ, ಇದೇ ಜುಲೈ 10ರಂದು ಸಂಜೆ 5 ಗಂಟೆವರೆಗೆ ಗಡುವು ನೀಡಿದೆ. ಜುಲೈ 11ರಂದು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!