spot_img
Tuesday, March 31, 2026
spot_img

ಕಜ್ಕೆ ಶ್ರೀ‌ಅನ್ನ ಪೂರ್ಣೆಶ್ವರೀ ದೇವಸ್ಥಾನ: ಗುರುಗಳ ಚಾತುರ್ಮಾಸ್ಯ ವೃತಾಚರಣೆ-ಪೂರ್ವಭಾವಿ ಸಭೆ

ಬ್ರಹ್ಮಾವರ : ದೇವರ ಮತ್ತು ಗುರುಗಳ ಸೇವೆ ಮಾಡಲು ಅಧಿಕಾರ ಮತ್ತು ಅಂತಸ್ತು ಮುಖ್ಯವಲ್ಲ ಪದವಿ ಪುರಸ್ಕಾರಗಳು ಗುರುಗಳ ಮತ್ತು ದೇವರ ಅನುಗ್ರಹದಿಂದ ದೊರಕುತ್ತದೆ ಎಂದು ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜೀಯವರು ಹೇಳಿದರು.

ಮಂಗಳವಾರ ನೂತನವಾಗಿ ನಿರ್ಮಾಣಗೊಂಡ ಕಜ್ಕೆ ಶ್ರೀ‌ಅನ್ನ ಪೂರ್ಣೆಶ್ವರೀ ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ರಚನೆ ಮತ್ತು ೨೦೨೪ ನೇ ಸಾಲಿನಲ್ಲಿ ಶ್ರೀ ಗುರುಗಳ ಚಾತುರ್ಮಾಸ್ಯ ವೃತಾಚರಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ಗುರುಗಳು ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ರಾಜೇಶ್ ಆಚಾರ್ಯ ಮಠದಬೆಟ್ಟು ಮತ್ತು ಗೋಪಾಲ್ ಆಚಾರ್ಯ ಸಂತೆಕಟ್ಟೆ ಉಪಾಧ್ಯಕ್ಷರಾಗಿ, ಗೌರವ ಮಾರ್ಗದರ್ಶಕರಾಗಿ ಎಸ್. ಕರುಣಾಕರ ಶೆಟ್ಟಿ ಕಜ್ಕೆ, ಟಿ. ಜಿ. ಆಚಾರ್ಯ, ವಿಧ್ವಾನ್ ಚಂದ್ರಕಾಂತ್ ಶರ್ಮ, ರವೀಂದ್ರ ಪುರೋಹಿತ್, ಕಾಶಿನಾಥ್ ಶಣೈ, ಶ್ರೀಧರ ಕಾಮತ್, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಅನೇಕರನ್ನು ಸದಸ್ಯರನ್ನಾಗಿ, ಸಲಹೆಗಾರನ್ನಾಗಿ ಆಯ್ಕೆ ಮಾಡಲಾಯಿತು.

ಜುಲೈ 20 ರಿಂದ ಸೆಪ್ಟೆಂಬರ್ 18 ರ ತನಕ  ಕಜ್ಕೆಯಲ್ಲಿ ನಡೆಯುವ ಗುರುಗಳ ಚಾತುರ್ಮಾಸ್ಯ ವೃತಾಚರಣೆಗೆ ನಾನಾ ಉಪಸಮಿತಿಗಳನ್ನು ರಚಿಸಿ ಗುರುಗಳ ಚಾತುರ್ಮಾಸ್ಯವನ್ನು ಯಶಸ್ವೀಗೊಳಿಸುವ ಸಂಕಲ್ಪ ಸಭೆಯಲ್ಲಿ ಮೂಡಿಬಂತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!