spot_img
Wednesday, January 22, 2025
spot_img

ಬೆಂಕಿ ಚಿರಾಯು ಕುಂದಾಪುರ ಇವರಿಗೆ ‘ಸ್ಪೂರ್ತಿ ಯುವರತ್ನ’ ಪ್ರಶಸ್ತಿ

ಬೆಂಗಳೂರು: ಸ್ಪೂರ್ತಿ ಕಲಾ ಟ್ರಸ್ಟ್ ರಿ., ನೃತ್ಯ ಸಂಗೀತ ಮತ್ತು ಅಭಿನಯ ತರಬೇತಿ ಶಾಲೆ ಕನಕಪುರ, ಬೆಂಗಳೂರು ಇವರು ಇಲ್ಲಿ ಜೂ.30ರಂದು ಆಯೋಜಿಸಿದಪರಿಸರ ದಿನಾಚರಣೆ ಅಂಗವಾಗಿ ನಾಟಕ ಪ್ರದರ್ಶನ, ‘ಬಡವರ ಊಟ ವಿಧಿಯಾಟ’ ಎಂಬ ಕಿರುಚಿತ್ರದ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೆಂಕಿ ಚಿರಾಯು ಕುಂದಾಪುರ ಇವರಿಗೆ ಸ್ಪೂರ್ತಿ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿರಾಯು ಸಮಾಜ ಸೇವಕ ಬೆಂಕಿಮಣಿ ಸಂತು ಅವರ ಪುತ್ರರಾಗಿದ್ದು ೭ವರ್ಷ ವಯಸ್ಸಿನ ಪುಟಾಣಿ. ತಂದೆಯಂತೆ ಸಮಾಜಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಸಮಾಜದಲ್ಲಿನ ಅಸಹಾಯಕರ ನೋವಿಗೆ ಸ್ಪಂದಿಸಲು ತಂದೆಯೊಂದಿಗೆ ವಿವಿಧ ವೇಷಗಳನ್ನು ಧರಿಸಿ ಧನ ಸಂಗ್ರಹ ಮಾಡಿ ನೊಂದ ಕುಟುಂಬಗಳಿಗೆ ನೀಡುವಲ್ಲಿ ಶ್ರಮಿಸುತ್ತಿದ್ದಾನೆ. ಈಗಾಗಲೇ ಎಳವೆ ವಯಸ್ಸಿನಲ್ಲಿ ಚಿತ್ರವಿಚಿತ್ರ ಭಯಾನಕ ವೇಷ ಧರಿಸಿ ಹಬ್ಬ, ಜಾತ್ರೆ, ಜನನಿಬಿಡು ಪ್ರದೇಶದಲ್ಲಿ ಜನರ ಚಿತ್ತ ತಮ್ಮತ್ತ ಸಳೆದು ಆರ್ಥಿಕ ಮೊತ್ತ ಸಂಗ್ರಹಿಸಿ ಬಡವರ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ತಂದೆಯ ಜೊತೆ ಸಾಥ್ ನೀಡುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!