spot_img
Wednesday, January 22, 2025
spot_img

ಸಾರ್ವಜನಿಕರ ಬಳಿಯೇ ಇದೆ 7,581 ಕೋಟಿ ರೂಪಾಯಿಯಷ್ಟು 2000 ಮುಖಬೆಲೆಯ ನೋಟುಗಳು !: ಆರ್‌ಬಿಐ

ಜನಪ್ರತಿನಿಧಿ (ನವದೆಹಲಿ) : 2000 ಮುಖಬೆಲೆಯ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದೊಂದು ಅಚ್ಚರಿಯ ಮಾಹಿತಿಯನ್ನು ನೀಡಿದೆ.

ಆರ್ ಬಿಐ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದು, ಸಾರ್ವಜನಿಕರ ಕೈಲಿದ್ದ ನೋಟುಗಳ ಪೈಕಿ ಈ ವರೆಗೂ ಶೇ.97.87 ರಷ್ಟು ನೋಟುಗಳು ಮರಳಿ ಆರ್ ಬಿಐ ವ್ಯಾಪ್ತಿಗೆ ಬಂದಿದೆ. 7,581 ಕೋಟಿ ರೂಪಾಯಿಯಷ್ಟು ಮೌಲ್ಯದ  2000  ಮುಖಬೆಲೆಯ ನೋಟುಗಳು ಸಾರ್ವಜನಿಕರ ಬಳಿಯೇ ಇದೆ ಎಂದು ಆರ್ ಬಿಐ ತಿಳಿಸಿದೆ.

ಚಲಾವಣೆಯಲ್ಲಿರುವ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು 2023 ರ ಮೇ 19 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಜೂನ್ 28, 2024 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 7,581 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.

2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿತ್ತು.

ಠೇವಣಿ ಮತ್ತು/ಅಥವಾ ರೂ 2000 ಬ್ಯಾಂಕ್ ನೋಟುಗಳ ವಿನಿಮಯದ ಸೌಲಭ್ಯವು ಅಕ್ಟೋಬರ್ 7, 2023 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!