Sunday, September 8, 2024

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಂಡ್ಸೆ: ಯೋಗವನ್ನು ನೀವು ಮಾಡುತ್ತಿದ್ದರೆ, ರೋಗವನ್ನು ತಡೆಯಬಹುದು. “ಯೋಗ ಮಾಡಿ ಆರೋಗ್ಯವಾಗಿರಿ”. ಎಂಬ ವಾಕ್ಯಗಳಂತೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮೂಹ ಸಂಪನ್ಮೂಲ ನಾಗರಾಜ್ ಶೆಟ್ಟಿ ಮತ್ತು ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಶಾಲಾ ದೈಹಿಕ ಶಿಕ್ಷಕರಾದ ರಾಜು .ಎನ್ ಅವರು ಯೋಗ ಮಾಡುವುದರಿಂದ ನಮ್ಮ ದೇಹಕ್ಕೆ ಉಂಟಾಗುವ ಪ್ರಯೋಜನಗಳ ಕುರಿತು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಅವರು, ಕೇವಲ ಯೋಗವನ್ನು ಇಂದಿನ ದಿನ ಅಷ್ಟೇ ಮಾಡದೆ ಅದನ್ನು ಪ್ರತಿದಿನವೂ ನಾವು ರೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳುವುದರ ಮೂಲಕ ಪ್ರತಿದಿನವೂ ಯೋಗ ಮಾಡುವಂತೆ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಾಪಕವೃಂದದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ರಾಜು ಎನ್ ಮತ್ತು ಇತರ ಆಧ್ಯಾಪಕರು ಸೂರ್ಯ ನಮಸ್ಕಾರ ಮತ್ತು ಯೋಗದ ಅನೇಕ ಭಂಗಿಗಳನ್ನು ಮಕ್ಕಳಿಗೆ ಮಾಡಿ ತೋರಿಸಿದರು. ಎಲ್ಲಾ ಮಕ್ಕಳು ಇದನ್ನು ನೋಡಿ ಅತ್ಯುತ್ತಮ ರೀತಿಯಲ್ಲಿ ಯೋಗವನ್ನು ಮಾಡಿ ಸಂತೋಷಪಟ್ಟರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!