spot_img
Sunday, February 15, 2026
spot_img

ಬಗ್ವಾಡಿ ಶಾಲೆ: ಎಂ.ಎನ್ ಚಂದನ್ ದಂಪತಿಗಳಿಂದ ನೋಟ್ ಪುಸ್ತಕ ವಿತರಣೆ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ2 ಬಗ್ವಾಡಿ ಇಲ್ಲಿಗೆ ದಾನಿಗಳಾದ ಕುಂಭಾಶಿಯ ಎಮ್.ಎನ್ ಚಂದನ್ ದಂಪತಿಗಳು ಉಚಿತವಾಗಿ ನೀಡುತ್ತಿರುವ ನೋಟ್ ಪುಸ್ತಕ ವಿತರಣಾ ಸಮಾರಂಭವು ನಡೆಯಿತು. ಪ್ರತಿವರ್ಷದಂತೆ ದಾನಿಗಳಾದ ಎಂ.ಎನ್ ಚಂದನ್ ದಂಪತಿಗಳು ಸ್ವತಃ ಆಗಮಿಸಿ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಆಗುವಷ್ಟು ಸಂಪೂರ್ಣ ನೋಟ್ ಪುಸ್ತಕವನ್ನು ವಿತರಣೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿ‌ಎಂಸಿ ಅಧ್ಯಕ್ಷರಾದ ಮಂಜುನಾಥ್ ಪುತ್ರನ್ ವಹಿಸಿದ್ದರು. ಸಭೆಯಲ್ಲಿ ಹಿರಿಯರಾದ ಸೂಲಿಯಣ್ಣ ಶೆಟ್ಟಿ, ಪಂಚಾಯತ್ ಸದಸ್ಯರಾದ ಅಶೋಕ ಪೂಜಾರಿ ಮತ್ತು ಶಾರದಾ ಎಸ್‌ಡಿ‌ಎಂಸಿ ಸದಸ್ಯರಾದ ಭಾವನಾ ಭಟ್, ಗೋಪಾಲ ಪೂಜಾರಿ, ಪ್ರಕಾಶ್ ಆಚಾರ್ಯ, ಹಾಗೂ ಎಲ್ಲಾ ಎಸ್‌ಡಿ‌ಎಂಸಿ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯನಿ ಶೈಲಜಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಶಿಕ್ಷಕಿ ಶ್ವೇತ ವಂದಿಸಿದರು. ಸಹಶಿಕ್ಷಕಿ ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಮಕ್ಕಳಿಗೂ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಸಭೆಯಲ್ಲಿ ಪೋಷಕರೊಂದಿಗೆ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಶಿಕ್ಷಕಿಯರಾದ ಜಯಂತಿ, ಸ್ವಾತಿ, ಹರ್ಷಿತ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!