Sunday, September 8, 2024

ಕಾಳಾವರ ಗ್ರಾಮ ಪಂಚಾಯತ್‌ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಜನಪ್ರತಿನಿಧಿ (ಕಾಳಾವರ) : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ವೆಚ್ಚದಲ್ಲಿ ಕಾಳಾವರ ಗ್ರಾಮ ಪಂಚಾಯತ್‌ ನೂತನ ಕಟ್ಟಡವನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷ ಮಂಜುನಾಥ್‌ ಶೆಟ್ಟಿಗಾರ್ ಹಾಗೂ ಉಪಾಧ್ಯಕ್ಷೆ ಪಾರ್ವತಿ ಶೇರೆಗಾರ್‌ ಉದ್ಘಾಟಿಸಿದರು.

ಬಳಿಕ ನಡೆದ ಸರಳ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ದೀಪ ಬೆಳಗಿಸಿ ಶುಭ ಹಾರೈಸಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮದ ಬೆಳವಣಿಗೆಯಲ್ಲಿ ಸ್ಥಳೀಯ ಆಡಳಿತದ ಪಾತ್ರ ಅಪಾರ. ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಡಳಿತ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

“ಗ್ರಾಮ ಸರ್ಕಾರವು ಸಾಮಾನ್ಯ ಜನರ ಅಗತ್ಯಗಳಿಗೆ ಸ್ಪಂದಿಸಬೇಕು ಮತ್ತು ಅವರ ಕೆಲಸಗಳು ತ್ವರಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ಪಕ್ಷಾತೀತವಾಗಿ ಒಟ್ಟಾಗಿ ಒಂದಾಗಿ ಜವಾಬ್ದಾರಿಯ ಹೊಣೆ ಹೊತ್ತು ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡಬೇಕು. ಕಾಳಾವಾರ ಗ್ರಾಮ ಪಂಚಾಯಿತಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸೇವೆ ಅಮೂಲ್ಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರತಿ ಗ್ರಾಮದ ಅಭಿವೃದ್ಧಿ ಆಯಾ ಕ್ಷೇತ್ರದ ಕ್ರಿಯಾಶೀಳ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಜನಪ್ರತಿನಿಧಿಯಾದವನು ಯಾವುದೇ ಬೇಧಭಾವವಿಲ್ಲದೆ ನ್ಯಾಯಸಮ್ಮತ ಹಾಗೂ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಜನರು ಸದಾ ಸ್ಮರಿಸುತ್ತಾರೆ ಎಂದಿದ್ದಲ್ಲದೇ, ಮುಂದಿನ ದಿನಗಳಲ್ಲಿ ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳಿಗೆ ಅನುಧಾನ ನೀಡುವ ಭರವಸೆಯನ್ನೂ ನೀಡಿದರು.

ಶಾಸಕ ಕಿರಣಕುಮಾರ ಕೊಡ್ಗಿ ಪಂಚಾಯತ್‌ ಸದಸ್ಯರಿಗೆ ಶುಭ ಹಾರೈಸಿ ಮಾತನಾಡಿ, ಅಭಿವೃದ್ಧಿ ಸದಾ ಕಾರ್ಯರೂಪದಲ್ಲಿದ್ದಾಗ ಮಾತ್ರ ಪ್ರತಿ ಹಳ್ಳಿ ಪ್ರಗತಿಯತ್ತ ಸಾಗಲು ಸಾಧ್ಯ ಎಂದರು. ಲಭ್ಯವಿರುವ ಶಾಸಕರ ಅನುಧಾನ ನೀಡುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.‌

ಪಂಚಾಯತ್‌ ಸದಸ್ಯರಾದ ರಾಮಚಂದ್ರ ನಾವಡ ಸ್ವಾಗತಿಸಿ, ರಮೇಶ್‌ ಶೆಟ್ಟಿ ವಕ್ವಾಡಿ ವಂದಿಸಿದರು.

ಈ ಸಂದರ್ಭದಲ್ಲಿ ಕಾಳಾವರ  ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ, ಪಂಚಾಯತ್‌ ಸದಸ್ಯರು, ಪಂಚಾಯತ್‌ ಸಿಬ್ಬಂದಿ ವರ್ಗದವರು ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.


(ಕಾಳಾವರ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!