Sunday, September 8, 2024

ಎಸ್.ಎಸ್.ಎಲ್.ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರಥಮ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ-ಎಂ. ಮಹೇಶ್ ಹೆಗ್ಡೆ

ಕುಂದಾಪುರ: ಕರ್ನಾಟಕ ರಾಜ್ಯದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. 600ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರಥಮ 50 ವಿದ್ಯಾರ್ಥಿಗಳಿಗೆ ಎಂ.ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದೆಂದು ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಹೇಳಿದರು.

ಜೂನ್ 10 ರಂದು ಎಕ್ಸಲೆಂಟ್ ಪ.ಪೂ ಕಾಲೇಜು ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ಪಾಲಕ-ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕುವುದರ ಮೂಲಕ ಗ್ರಾಮೀಣ ಪ್ರತೀಭೆಗಳನ್ನು ಪೋಷಿಸಿ ಬೆಳೆಸುವ ಮನಸ್ಸಿನಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಟ್ರಸ್ಟ್ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಟ್ರಸ್ಟ್‌ನ ವತಿಯಿಂದ ಉಚಿತ ಶಿಕ್ಷಣ ಹಾಗೂ ಶುಲ್ಕ ರಿಯಾಯಿತಿ ನೀಡುವ ಮೂಲಕ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಆಸರೆಯಾಗುವುದಾಗಿ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ಪ್ರಸಕ್ತ ವರ್ಷದ ಶೈಕ್ಷಣಿಕ ಕಾರ್‍ಯವೈಕರಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಗ್ರ ಮಹಿತಿ ನೀಡಿ ಪರೀಕ್ಷಾ ಫಲಿತಾಂಶ ಪರೀಕ್ಷಾ ವಿಧಾನ ಸಿಬ್ಬಂಧಿ ವರ್ಗ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ವಸತಿ ನಿಲಯದ ವೈಶಿಷ್ಯತೆ ಆಟೋಟ ಸ್ಪರ್ಧೆಗಳು ಧಾರ್ಮಿಕ ಹಬ್ಬಗಳ ಆಚರಣೆ ಮತ್ತು ಸಂಸ್ಥಯ ಇನ್ನಿತರ ವಿಶೇಷತೆಗಳ ಬಗ್ಗೆ ಸ್ಥೂಲ ಮಾಹಿತಿ ನೀಡಿದರು.

ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಎರಡೂ ವಿಭಾಗದ ಎಲ್ಲಾ ವಿಷಯ ಮುಖ್ಯಸ್ಥರು ಶೈಕ್ಷಣಿಕ ವರ್ಷದ ಪಠ್ಯ ಪ್ರವಚನಗಳ ಯೋಜನೆ ಮತ್ತು ಯೋಚನೆಗಳ ಬಗ್ಗೆ ತಿಳಿಸುತ್ತಾ ಕ್ಲಪ್ತ ಸಮಯದಲ್ಲಿ ಯೋಜಿತ ಪಠ್ಯಗಳನ್ನು ಮುಗಿಸಿ, ವಿದ್ಯಾರ್ಥಿ ಕೇಂದ್ರಿಕೃತವಾಗಿ ತರಗತಿ ಹಾಗೂ ತರಬೇತಿಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಪಾಲಕರಿಗೆ ಭರವಸೆ ನೀಡಿದರು.

ಪಾಲಕ – ಶಿಕ್ಷಕರ ಸಭೆಯ ನಾಲ್ಕು ದಿನ ನಾಲ್ಕು ಹಂತಗಳಲ್ಲಿ ಜರುಗಿದ್ದು ವಿಜ್ಞಾನ ವಿಭಾಗದ ವಸತಿನಿಲಯ ಹಾಗೂ ಡೇ-ಬೋರ್ಡಗಳ ಮತ್ತು ವಾಣಿಜ್ಯ ವಿಭಾಗದ ವಸತಿನಿಲಯ ಹಾಗೂ ಡೇ-ಬೋರ್ಡರ್ ವಿದ್ಯಾರ್ಥಿಗಳ ಪಾಲಕರ-ಶಿಕ್ಷಕರ ಸಭೆಯನ್ನು ಪ್ರತ್ಯೇಕವಾಗಿ ಬೇರೆ ಬೇರೆ ದಿನಾಂಕಗಳಂದು ನಡೆಸಲಾಯಿತು.

ಕಾರ್‍ಯಕ್ರಮದಲ್ಲಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿ ವರ್ಗ ವಿದ್ಯಾರ್ಥಿಗಳು ಪಾಲಕರು ಭಾಗಿಯಾಗಿದ್ದಾರೆ. ಉಪನ್ಯಾಸಕ ಶ್ರೀನಿವಾಸ ವೈದ್ಯ ಕಾರ್‍ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!