Sunday, September 8, 2024

ಮಣೂರು ಪಡುಕರೆ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ 

kota: ಮಣೂರು ಪಡುಕರೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷ ದಾಖಲಾತಿ ಹೊಂದಿದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪುಷ್ಪ ಗುಚ್ಛಗಳನ್ನು ನೀಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಚರಣ ಮೂರ್ತಿ, ದಿಗಂತ್, ಭೂಮಿಕಾ ಸಿ., ಸ್ನೇಹಾ ಮತ್ತು ಉಷಾ ತಮ್ಮ ನಿರೀಕ್ಷೆಗಳನ್ನು ಹೇಳಿಕೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸವನ್, ನಿವೇದಿತಾ, ನಿಶಾ ಎನ್., ಝಾಹೀಮಾ ಮತ್ತು ಶರಣ್ ಶುಭಕೋರಿದರು. ಕಾಲೇಜು ಉಪನ್ಯಾಸಕರು ಹೊಸ ವಿದ್ಯಾರ್ಥಿಗಳ ಕಲಿಕೆಯ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಹಿಂಜರಿಕೆ ನಿವಾರಣೆಗೆ ಮೋಜಿನ ಆಟಗಳನ್ನು ಆಡಿಸಿದರು.
ಪ್ರಾಂಶುಪಾಲರಾದ ಡೆನಿಸ್ ಬಾಂಜಿ ಕೆ ಅಧ್ಯಕ್ಷತೆ ವಹಿಸಿದ್ದರು.‌ ಉಪನ್ಯಾಸಕ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಅನುಜ್ ಸ್ವಾಗತಿಸಿ, ವಿದ್ಯಾರ್ಥಿನಿ ಶೃದ್ಧಾ ಕಾಲೇಜಿನ ನೀತಿ ನಿಯಮಗಳ ಪಟ್ಟಿ ವಾಚಿಸಿದಳು.‌ ವಿದ್ಯಾರ್ಥಿನಿಯರಾದ ಫಾತಿಮಾತುಲ್ ಮಿಸ್ರಿಯಾ ಹಾಗೂ ಅಪೇಕ್ಷಾ ಕಾರ್ಯಕ್ರಮ ನಿರ್ವಹಿಸಿ, ಸೃಜನಾ ಕೆ. ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!