Saturday, October 12, 2024

ನಮ್ಮ ನಾಡ ಒಕ್ಕೂಟ: ಶೌಚಾಲಯ ನಿರ್ಮಾಣಕ್ಕೆ ಸಹಾಯಹಸ್ತ

ಕುಂದಾಪುರ: ನಮ್ಮ ನಾಡ ಒಕ್ಕೂಟ (ರಿ) ಕುಂದಾಪುರ ತಾಲ್ಲೂಕು ಸಮಿತಿ ಇದರ ವತಿಯಿಂದ ಸಹಕಾರ- ನಮ್ಮ ನಾಡ ಒಕ್ಕೂಟ (ರಿ) ಉಡುಪಿ ಜಿಲ್ಲಾ ಸಮಿತಿ ಹಾಗೂ ಎನ್.ಎನ್.ಓ ಪರ್ಯವರಣ ಸಂರಕ್ಷಣಾ ಸಮಿತಿ ಉಡುಪಿ ಘಟಕ ಇದರ ಸಹಕಾರದೊಂದಿಗೆ ಸಮಾಜ ಸೇವಕರಾದ ಫಜಲ್ ನೇರಳಕಟ್ಟೆ, ಅಬ್ದುಲ್ ಶುಕುರ್ ಬೆಳ್ವೆ ಸಮಿ‌ಉಲ್ಲ ಇವರುಗಳ ನೇತೃತ್ವದಲ್ಲಿ ಕುಂದಾಪುರ ತಾಲ್ಲೂಕು ಮಾವಿನಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅರ್ಪೂರ್ಣಗೊಂಡ ಮನೆಯ ಶೌಚಾಲಯ ನಿರ್ಮಾಣಕ್ಕೆ ಸಹಾಯಹಸ್ತ ಕಾರ್ಯಕ್ರಮ ಶುಕ್ರವಾರ ಮಾವಿನಕಟ್ಟೆ ಅಲ್ ಸಬರ್ ಮಸೀದಿಯಲ್ಲಿ ನಡೆಯಿತು.

ಕೊಡುಗೈ ದಾನಿ ಹಂಝ ಉಚ್ಚಿಲ ಸಹಾಯಧನ ಚೆಕ್ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು. ಅತಿಥಿಗಳಾಗಿ ಎನ್.ಎನ್.ಓ ಪರ್ಯವರಣ ಸಂರಕ್ಷಣಾ ಸಮಿತಿ ಅಧ್ಯಕ್ಷ ಶೈಖ್ ಅಬ್ದುಲ್ ವಾಹಿದ್ ಉಡುಪಿ, ಎನ್.ಎನ್.ಓ ಟ್ರಸ್ಟಿ ಪೀರು ಸಾಹೇಬ್, ಎನ್.ಎನ್.ಓ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಹೀರ್ ನಾಕುದಾ ಗಂಗೊಳ್ಳಿ ,ಜಿಲ್ಲಾ ಸಮಿತಿ ಸದಸ್ಯರಾದ ಮೊಹಮ್ಮದ್ ನಿಹಾರ ಕುಂದಾಪುರ, ಪಳ್ಳಿ ಉಸ್ಮಾನ್ ಗುಲ್ವಾಡಿ, ಕುಂದಾಪುರ ಯುವ ಸಂಯೋಜಕ ಸಮಿ‌ಉಲ್ಲ, ಮುಂತಾದವರು ಉಪಸ್ಥಿತರಿದ್ದರು.

ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೈನ್ ಹಾಯ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎನ್.ಎನ್.ಓ ಕುಂದಾಪುರ ಪ್ರಧಾನ ಕಾರ್ಯದರ್ಶಿ ಫಜಲ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎನ್.ಓ ಹೆಬ್ರಿ ಘಟಕ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಸ್ವಾಗತಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!