Saturday, October 12, 2024

ಚಿತ್ತೂರು ಬಿ‌ಎಸ್‌ಎನ್‌ಎಲ್ ಟವರ್ ನಲ್ಲಿ ನೆಟ್‌ವರ್ಕ್ ಸಮಸ್ಯೆ

ಕುಂದಾಪುರ: ಕುಂದಾಪುರ ತಾಲೂಕು ಚಿತ್ತೂರಿನಲ್ಲಿರುವ ಬಿ‌ಎಸ್‌ಎನ್‌ಎಲ್ ಟವರ್ ನಲ್ಲಿ ಕಳೆದ ಒಂದು ವಾರದಿಂದ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಬಿ.ಎಸ್.ಎನ್.ಎಲ್ ಬಳಕೆದಾರರು ಇದರಿಂದ ಸಮಸ್ಯೆ ಎದುರಿಸುತ್ತಿದ್ದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚಿತ್ತೂರಿನಲ್ಲಿರುವ ಬಿ‌ಎಸ್‌ಎನ್‌ಎಲ್ ಟವರ್ ನಿಂದ ಸಮರ್ಪಕ ನೆಟ್‌ವರ್ಕ್ ಸಿಗುತ್ತಿಲ್ಲ. ಟವರ್ ವ್ಯಾಪ್ತಿಯಲ್ಲಿ ಸಮರ್ಪಕ ನೆಟ್‌ವರ್ಕ್ ಇಲ್ಲದೆ ಬಿ‌ಎಸ್‌ಎನ್‌ಎಲ್ ಬಳಕೆದಾರರು ಆಕ್ರೋಶಗೊಂಡಿದ್ದಾರೆ. ಆಗಾಗ ಇಲ್ಲಿ ಇದೇ ಸಮಸ್ಯೆ ಬಾಧಿಸುತ್ತಿದೆ. ಪದೇ ಪದೇ ನೆಟವರ್ಕ್ ಕೆಟ್ಟು ಹೋಗುತ್ತದೆ. ಇಲ್ಲಿನ ಮೊಬೈಲ್ ಟವರ್‌ನಿಂದ ಸುತ್ತಲು ಹಲವು ಹಳ್ಳಿಗಳಿವೆ. ಬಿ‌ಎಸ್‌ಎನ್‌ಎಲ್ ನೆಟ್‌ವರ್ಕ್ ನಂಬಿಕೊಂಡ ಸಾವಿರಾರು ಮಂದಿ ಇದ್ದಾರೆ. ಈ ಒಂದೇ ಬಿ‌ಎಸ್‌ಎನ್‌ಎಲ್ ನೆಟ್ ವರ್ಕ್ ನಂಬಿರುವ ಜನ ಪದೇ ಪದೆ ನೆಟ್‌ವರ್ಕ್ ಸಂಪರ್ಕ ಕಡಿತಗೊಳ್ಳುವುದು, ನೋ ಸಿಗ್ನಲ್ ತೋರಿಸುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಏನೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಾರೆ.

ಬಿ‌ಎಸ್‌ಎನ್‌ಎಲ್ ನೆಟ್ ವರ್ಕ್ ಆಧಾರಿತವಾಗಿ ಈ ಭಾಗದಲ್ಲಿ ಹಲವಾರು ಸೇವೆಗಳು ನಡೆಯುತ್ತಿವೆ. ಈಗ ಬಹುತೇಕ ಎಲ್ಲಾ ತಾಂತ್ರಿಕ ವ್ಯವಸ್ಥೆಗಳಿಗೆ ಸಿಗ್ನಲ್ ಅವಶ್ಯಕವಾಗಿದೆ. ಹೀಗೆ ಸರಕಾರಿ ಸ್ವಾಮ್ಯದ ಸಂಸ್ಥೆಯೇ ಹೀಗೆ ಬೇಜಬ್ದಾರಿಯುತವಾಗಿ ವರ್ತಿಸುವುದು ಗ್ರಾಮಸ್ಥರನ್ನು ಕೆರಳಿಸಿದೆ. ಟವರ್ ಇದ್ದು ಸರಿಯಾಗಿ ಸಿಗ್ನಲ್ ಸಮಸ್ಯೆ ದುರಸ್ತಿ ಪಡಿಸದೇ ಇರುವುದು ಜನತೆ ಬಿ‌ಎಸ್‌ಎನ್‌ಎಲ್ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ.

ಇಲ್ಲಿ ಬೇರೆ ಬೇರೆ ಖಾಸಗಿ ಮೊಬೈಲ್ ಟವರ್‌ಗಳಿದ್ದು ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಬಿ‌ಎಸ್‌ಎನ್‌ಎಲ್ ಮಾತ್ರ ನೆಟ್ ವರ್ಕ್ ಪದೇ ಪದೇ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

“ಬಿ‌ಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಅವ್ಯವಸ್ಥೆ ಬಿ‌ಎಸ್‌ಎನ್‌ಎಲ್ ಬಳಸುವ ಗ್ರಾಹಕರನ್ನು ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಸರಿಯಾಗಿ ಸ್ಪಂದಿಸಿ ಸಮಸ್ಯೆ ಪರಿಹರಿಸಿಲ್ಲ. ಈಗ ಇಂಟರ್ ನೆಟ್‌ನ ಅವಶ್ಯತೆ ಅನಿವಾರ್ಯವಾಗಿದೆ. ಚಿತ್ತೂರು ಟವರ್ ನಲ್ಲಿ ಪದೇ ಪದೇ ಸಮಸ್ಯೆಯಾಗುತ್ತಿದೆ. ಸಿಗ್ನಲ್ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕಾಗಿದೆ”-ಗೋವರ್ದನ್ ಜೋಗಿ, ವಂಡ್ಸೆ ಗ್ರಾ.ಪಂ ಉಪಾಧ್ಯಕ್ಷರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!