Wednesday, September 11, 2024

ಬಿಜೆಪಿ‌ ಜೊತೆಗೆ ಆರ್‌ಎಸ್‌ಎಸ್‌ ಬೈಟೆಕ್ | ಮೈತ್ರಿ ಪಕ್ಷಗಳ ಮೇಲೆ ವಿಶೇಷ ನಿಗಾ ವಹಿಸಲು ಪ್ರಮುಖ ಸಚಿವರಿಗೆ ಜವಾಬ್ದಾರಿ !

ಜನಪ್ರತಿನಿಧಿ (ನವ ದೆಹಲಿ) : ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಅವಕಾಶವನ್ನು ಮಾಡಿಕೊಟ್ಟಲ್ಲ, ಆಂಧ್ರಪ್ರದೇಶದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರನ್ನು ಎನ್‌ಡಿಎ ಮೈತ್ರಿಯಲ್ಲಿ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಟಿಡಿಪಿ ಹಾಗೂ ಜೆಡಿಯು ಪಕ್ಷಗಳು ಈಗ ಸಂಪುಟದ ಪ್ರಮುಖ ಹುದ್ದೆಗಳ ಬೇಡಿಕೆ ಇಟ್ಟಿದ್ದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಈಗಾಗಲೇ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಮನೆಯಲ್ಲಿ ಸಚಿವ ಸಂಪುಟದ ಬಗ್ಗೆ ಸಭೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮೈತ್ರಿಪಕ್ಷಗಳನ್ನು ಸಮಾಧಾನದಲ್ಲಿರಿಸಿಕೊಳ್ಳುವುದು ಹಾಗೂ ಸಚಿವ ಸಂಪುಟದಲ್ಲಿ ಟಿಡಿಪಿ ಹಾಗೂ ಜೆಡಿಯು ಬೇಡಿಕೆಗಳನ್ನು ಪೂರೈಸುವುದು ಹೇಗೆ ಎನ್ನುವುದರ ಬಗ್ಗೆ ಚರ್ಚೆಯಾಗಿದೆ ಎಂದು ಸುದ್ದಿ ಮೂಲಗಳು ಮಾಹಿತಿ ನೀಡಿದೆ.

ಆರ್‌ಎಸ್‌ಎಸ್‌ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಬಿ. ಎಲ್‌ ಸಂತೋಷ್‌, ನರೇಂದ್ರ ಮೋದಿ, ಅಮಿತ್‌ ಶಾ, ಪ್ರಹ್ಲಾದ್‌ ಜೋಶಿ, ಜೆ.ಪಿ ನಡ್ಡಾ ಸೇರಿ ಪ್ರಮುಖರು ಇರುವ ಸಭೆಯಲ್ಲಿ ಬಿಜೆಪಿ ಈ ಬಾರಿ ಮ್ಯಾಜಿಕ್‌ ನಂಬರ್‌ ದಾಟದೇ ಇರುವ ಕಾರಣದಿಂದ ಕನಿಷ್ಠ ಐದು ಸಚಿವ ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಯಾರಾಗಬೇಕು ಹಾಗೂ ಮೈತ್ರಿ ಪಕ್ಷಗಳು ಬೇರೆಡೆಗೆ ಮುಖಮಾಡದಂತೆಯೂ ನೋಡಿಕೊಳ್ಳಬೇಕಾಗಿರುವ ಅನಿವಾರ್ಯತೆಯ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಾತ್ರವಲ್ಲದೇ, ಎನ್‌ಡಿಎ ಮೈತ್ರಿಪಕ್ಷಗಳು ʼಇಂಡಿಯಾʼ ಮೈತ್ರಿಕೂಟದ ಕಡೆಗೆ ಯಾವುದೇ ಕಾರಣಕ್ಕೆ ವಾಲದಂತೆ ನೋಡಿಕೊಳ್ಳಲು ಪ್ರಮುಖ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ.  ತಿಳಿದು ಬಂದಿದೆ. ಟಿಡಿಪಿ ಹಾಗೂ ಜೆಡಿಎಸ್‌ ನಾಯಕರ ಮೇಲೆ ಪಿಯೂಷ್‌ ಗೋಯಲ್‌, ನಿತೀಶ್‌ ಕುಮಾರ್‌ ಪಕ್ಷದ ಮೇಲೆ ಅಶ್ವಿನಿ ವೈಷ್ಣವ್‌ ನಿಗಾ ವಹಿಸುವಂತೆ ಜವಾಬ್ದಾರಿ ನೀಡಲಾಗಿದೆ. ಮಿತ್ರಪಕ್ಷಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಪ್ರಮುಖ ನಾಯಕರನ್ನು ಆರ್‌ಎಸ್‌ಎಸ್‌ ಜೊತೆಗಿನ ಬಿಜೆಪಿ ಸಭೆಯಲ್ಲಿ ನೇಮಿಸಲಾಗಿದೆ.

ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ‌ಜೆಡಿಯು ಪಕ್ಷದ ನಿತೀಶ್ ಕುಮಾರ್‌ ಈ ಬಾರಿ ʼಕಿಂಗ್‌ ಮೇಕರ್ಸ್‌ʼ ಆಗಿದ್ದು, ದೊಡ್ಡ ಹುದ್ದೆಗಳ ಮೇಲೆಯೇ ಕಣ್ಣಿಟ್ಟಿದ್ದಾರೆ. ಟಿಡಿಪಿಗೆ ಮೂರು ಹಾಗೂ ಜೆಡಿಯು ಗೆ ಎರಡು ಸಚಿವ ಸ್ಥಾನ ನೀಡುವ ಬಗ್ಗೆ ಸಧ್ಯ ಆರ್‌ಆರ್‌ಎಸ್‌ ಬಿಜೆಪಿಯೊಂದಿಗೆ ನಡೆಸಿದ ಸರ್ಕಾರ ರಚನೆ ಹಾಗೂ ಸಚಿವ ಸಂಪುಟದ ಬಗೆಗಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಟಿಡಿಪಿ ಪ್ರತಿ ಐವರು ಸಂಸದರಿಗೆ ಒಂದು ಸಚಿವ ಸ್ಥಾನ ಹಾಗೂ ಲೋಕಸಭಾ ಸ್ಪೀಕರ್‌ ಸ್ಥಾನಕ್ಕೆ ನಾಯ್ಡು ಪಟ್ಟು ಹಿಡಿದಿದ್ದಲ್ಲದೇ, ಎನ್‌ಡಿಎ ಮೈತ್ರಿಯಲ್ಲಿ ಟಿಡಿಪಿ ನಾಯಕರಿಗೆ ಪ್ರಾಶಸ್ತ್ಯ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ, ವಸತಿ, ಬಂದರು ಹಾಗೂ ಹಡಗು ಖಾತೆಗೆ ನಾಯ್ಡು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!