spot_img
Saturday, June 21, 2025
spot_img

ʼಇಂಡಿಯಾʼ ಮಹತ್ವದ ಸಭೆ : ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಒಮ್ಮತದ ನಿರ್ಧಾರ | ಕನಿಷ್ಠ 295 ಕ್ಷೇತ್ರಗಳಲ್ಲಿ ʼಇಂಡಿಯಾʼ ಗೆಲುವು : ಖರ್ಗೆ ವಿಶ್ವಾಸ

ಜನಪ್ರತಿನಿಧಿ (ನವ ದೆಹಲಿ) : ʼಇಂಡಿಯಾʼ ಮೈತ್ರಿಕೂಟದ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅಚರ ಮನಯಲ್ಲಿ ಇಂದು (ಶನಿವಾರ) ಮಹತ್ವದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ವಿಮರ್ಶೆ ಮಾಡಿದ್ದಾರೆ.

ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಖರ್ಗೆ, ʼಇಂಡಿಯಾʼ ಮೈತ್ರಿಕೂಟ ಕನಿಷ್ಠ 295 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮನ್ನು ವಿಭಜಿಸುವುದಕ್ಕೆ ಪ್ರಯತ್ನ ಮಾಡಬೇಡಿ. ನಾವು ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಾಗಿ ಇರಲಿದ್ದೇವೆ ಎಂದು ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮಾತನಾಡಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಇಂಡಿಯಾ ಮೈತ್ರಿಕೂಟ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ನಿರುದ್ಯೋಗ, ಬೆಲೆ ಏರಿಕೆ, ಜಿಎಸ್‌ಟಿ, ಇಡಿ ಹಾಗೂ ಆದಾಯ ತೆರಿಗೆಯ ಭೂಕಂಪ ಸಂಭವಿಸಿದೆ. ಈ ಭೂಕಂಪಗಳು ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿ, ನಾವು (ಮೈತ್ರಿಕೂಟ) 295ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಬಿಜೆಪಿಯ ೪೦೦ ಪಾರ್‌ ಚಿತ್ರ ಮೊದಲ ಹಂತದ ಚುನಾವಣೆಯಲ್ಲೇ ಫ್ಲಾಪ್‌ ಆಗಿದೆ ಎಂದು ಹೇಳಿದ್ದಾರೆ.

 ಟಿವಿಗಳ ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಭಾಗವಹಿಸಲು ನಿರ್ಧಾರ  :

ಕಾಂಗ್ರೆಸ್‌ ನಾಯಕ ಪವನ್‌ ಖೆರಾ ಟ್ವೀಟ್‌ ಮಾಡಿದ್ದು, ʼಇಂಡಿಯಾ ಮೈತ್ರಿಕೂಟದ ಪಕ್ಷಗಳು ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಭಾಗವಹಿಸುವ ಪರ ಹಾಗೂ ವಿರುದ್ಧ ಅಂಶಗಳನ್ನು ಪರಿಗಣಿಸಿದ ನಂತರ, ಎಲ್ಲಾ ಪಕ್ಷಗಳು ಇಂದು ಸಂಜೆ ಟಿವಿ ವಾಹಿನಿಗಳಲ್ಲಿ ನಡೆಯುವ ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಭಾಗವಹಿಸಲು ಒಮ್ಮತದಿಂದ ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಯಾವುದೇ ಎಕ್ಸಿಟ್‌ ಪೋಲ್‌ ಚರ್ಚೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹಾಗೂ ಅದರ ನೇತೃತ್ವದ ಮೈತ್ರಿಯ ಅಂಗ ಪಕ್ಷಗಳು ಫಲಿತಾಂಶಕ್ಕೂ ಮೊದಲೇ ಸೋಲು ಒಪ್ಪಿಕೊಂಡಿದೆ ಎಂದು ಟೀಕೆ ಮಾಡಿದ್ದವು ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!