Wednesday, September 11, 2024

ಕುಂದಾಪುರ ಬಿ. ಬಿ. ಹೆಗ್ಡೆ ಕಾಲೇಜು: ನಾಯಕತ್ವ ತರಬೇತಿ

ಕುಂದಾಪುರ: ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ನ ಆಶ್ರಯದಲ್ಲಿ
ಡ್ರೀಮ್ಸ್ ಇವೆಂಟ್,ಕುಂದಾಪುರದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಗಾರ ನಡೆಯಿತು.

ಜೇಸಿ ವಲಯ ತರಬೇತುದಾರ  ಕೆ.ಕೆ. ಶಿವರಾಮ್ ತರಬೇತಿ ನೀಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊರಕುವಂತಹ ಎಲ್ಲಾ
ಚಟುವಟಿಕೆಗಳಲ್ಲಿ, ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ. ಅವಕಾಶದ ಸದ್ಬಳಕೆಯೇ ನಾಯಕತ್ವದ
ಬೆಳವಣಿಗೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಪ್ರೊ. ಕೆ ಉಮೇಶ್ ಶೆಟ್ಟಿ ವಹಿಸಿ ಮಾತನಾಡಿ, ನಾಯಕತ್ವವು
ಪ್ರತಿಯೊಬ್ಬರ ಜೀವನದಲ್ಲಿ ವಿಶೇಷವಾಗಿ ಪದವಿ ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ,
ಏಕೆಂದರೆ ಅವರು ಶೀಘ್ರದಲ್ಲೇ ತಮ್ಮ ವೃತ್ತಿ ಜೀವನದತ್ತ ಹೆಜ್ಜೆ ಹಾಕುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡ್ರೀಮ್ಸ್ ಇವೆಂಟ್, ಕುಂದಾಪುರದ ಮ್ಯಾನೇಜಿಂಗ್ ಪಾರ್ಟ್ನರ್ ಶ್ರೀ ಗಿರೀಶ್ ಹೆಬ್ಬಾರ್ ಹಾಗೂ ಕಾಲೇಜಿನ ರೋಟಾರಾಕ್ಟ್
ಕ್ಲಬ್ ನ ಸಂಯೋಜಕಿ ಪೂಜಾ ಕುಂದರ್ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ವಂದಿಸಿದರು. ವಿದ್ಯಾರ್ಥಿ ಶ್ರೀಶಾಂತ್ ಪ್ರಾರ್ಥಿಸಿದರು. ವಾಣಿಜ್ಯ ಪ್ರಾಧ್ಯಾಪಕ ಸುಹಾಸ್ ಜಟ್ಟಿಮನೆ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!