spot_img
Wednesday, April 1, 2026
spot_img

‘ವಿವೇಕ’ದ ಬಗ್ಗೆ ಅರ್ಥ ಗೊತ್ತಿಲ್ಲದ ಮೋದಿ ಏನು ‘ಧ್ಯಾನ’ ಮಾಡುತ್ತಾರೆ’ : ಕಪಿಲ್ ಸಿಬಲ್ ವ್ಯಂಗ್ಯ

ಜನಪ್ರತಿನಿಧಿ (ಚಂಡೀಗಢ) : ಮೋದಿ ಅವರು ‘ಪ್ರಾಯಶ್ಚಿತ್ತ’ಕ್ಕಾಗಿ ಕನ್ಯಾಕುಮಾರಿಗೆ ಹೋಗುವುದು ಒಳ್ಳೆಯದು. ‘ವಿವೇಕ’ದ ಬಗ್ಗೆ ಅರ್ಥ ಗೊತ್ತಿಲ್ಲದ ಅವರು ಏನು ‘ಧ್ಯಾನ’ ಮಾಡುತ್ತಾರೆ’ ಎಂದು  ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದಾರೆ.

ಮೋದಿ ಧ್ಯಾನದ ಬದಲಿಗೆ ‘ಪ್ರಾಯಶ್ಚಿತ್ತಕ್ಕಾಗಿ ಹೋಗುತ್ತಿದ್ದರೆ, ಅದು ಒಳ್ಳೆಯದು ಅಥವಾ ಸ್ವಾಮಿ ವಿವೇಕಾನಂದರ ಬರಹಗಳು ಹಾಗೂ ಭಾಷಣಗಳಿಂದ ಸ್ಫೂರ್ತಿ ಪಡೆಯಲು ಹೊರಟರೆ ಒಳ್ಳೆಯದು ಎಂದು ಸಿಬಲ್‌ ಲೇವಡಿ ಮಾಡಿದ್ದಾರೆ.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ. ಕಳೆದ 10 ವರ್ಷಗಳಿಂದ ಮೋದಿ ಏನು ಮಾಡಿದ್ದಾರೆ?, ಏನು ಮಾಡಿದ್ದಾರೆಂದು ಪ್ರಧಾನಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ? ಅವರ ಸಾಧನೆಗಳೇನು?, ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಅವರು ಸಂಪೂರ್ಣ ವಿಫಲವಾಗಿದ್ದಾರೆ’ ಎಂದು ಸಿಬಲ್‌ ಕಟುವಾಗಿ ಟೀಕಿಸಿದ್ದಾರೆ.

ಇನ್ನು,’ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ಮೋದಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತಿದ್ದರು. ಅಧಿಕಾರಕ್ಕೆ ಬಂದ ನಂತರ ‘ನವ ಭಾರತ’ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬಂದ 120 ತಿಂಗಳು (10 ವರ್ಷ) ಆಗಿದೆ. ಯಾವ ‘ನವ ಭಾರತ’ ನಿರ್ಮಾಣ ಮಾಡಿದ್ದಾರೆ’ ಎಂದು ಅವರು ಗುಡುಗಿದ್ದಾರೆ.

ಮೋದಿ ಬಿಹಾರದಲ್ಲಿ ನೀಡಿದ್ದ ‘ಮುಜ್ರಾ’ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಬಲ್‌, ‘ಮೋದಿ ಏನಾದರೂ ಸಾಧನೆ ಮಾಡಿದ್ದರೆ ಮಂಗಳಸೂತ್ರ, ಮುಜ್ರಾ, ವೋಟ್‌ ಬ್ಯಾಂಕ್ ರಾಜಕೀಯ, ವೋಟ್ ಜಿಹಾದ್ ಬಗ್ಗೆ ಮಾತನಾಡುತ್ತಿರಲಿಲ್ಲ’ ಎಂದು ಕುಟುಕಿದ್ದಾರೆ.

ಇನ್ನು,ಈ ಬಾರಿ ಮೋದಿ ಅವರು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರ, ಮೇ 30ರ ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ವಿವೇಕಾನಂದ ಸ್ಮಾರಕದ ‘ಧ್ಯಾನ ಮಂಟಪ’ದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!