Sunday, September 8, 2024

ಜೂನ್‌ 1 ಕ್ಕೆ ʼಇಂಡಿಯಾʼ ಮೈತ್ರಿಕೂಟದ ಮಹತ್ತರ ಸಭೆ | ಪ್ರಧಾನಿ ಅಭ್ಯರ್ಥಿಯ ಹೆಸರು ಘೋಷಣೆ !?

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆಯ ಅಂತಿಮ ಹಾಗೂ ಏಳನೇ ಹಂತದ ಚುನಾವಣೆ ಜೂನ್‌ 1 ರಂದು ಮುಕ್ತಾಯಗೊಳ್ಳಲಿದೆ. ಅದೇ ದಿನ ಮಧ್ಯಾಹ್ನ ʼಇಂಡಿಯಾʼ ಮೈತ್ರಿಕೂಟ ಮಹತ್ತರ ಸಭೆಯನ್ನು ಕರೆದಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಚುನಾವಣೆಯ ಫಲಿತಾಂಶ ಜೂನ್‌ 4 ರಂದು ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮೈತ್ರಿಕೂಟ ಅನುಸರಿಸಿದ ಕಾರ್ಯಕ್ಷಮತೆ ಹಾಗೂ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ಮಾಡುವ ಉದ್ದೇಶದಿದ ಹಾಗೂ ಮೈತ್ರಿಕೂಟದ ಇತರೆ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗಿದೆ.

ಈ ಸುತ್ತಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮರಳಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಪ್ರಧಾನಿ ಹುದ್ದೆಗೆ ಮತ್ತೆ ಮೋದಿ ಏರುವುದಿಲ್ಲ ಎಂಬ ವಿಶ್ವಾಸವನ್ನು ಮೈತ್ರಿಕೂಟದ ಪ್ರಮುಖ ನಾಯಕರು ಬಹುತೇಕ ಎಲ್ಲಾ ಚುನಾವಣಾ ಪ್ರಚಾರದಲ್ಲಿ ವ್ಯಕ್ತ ಪಡಿಸಿದ್ದಾರೆ. ಮಾತ್ರವಲ್ಲದೇ ಮೋದಿ ಅವರನ್ನು ಒಳಗೊಂಡು ಬಿಜೆಪಿಯ ಬಹುತೇಕ ಎಲ್ಲಾ ನಾಯಕರು ಮರಳಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ಮಾತಗಳನ್ನಾಡಿದ್ದರು.

ʼಇಂಡಿಯಾʼ ಮೈತ್ರಿಕೂಟದ ಈ ಮಹತ್ತರ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಆಯ್ಕೆ ಮತ್ತು ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿವೆ. ಹಾಗೂ ಗೆಲ್ಲಲಿರುವ ಕ್ಷೇತ್ರಗಳು, ಜಿದ್ದಾಜಿದ್ದಿನ ಕ್ಷೇತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ ಮುಂದಿನ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂಬ ಮಾಹಿತಿ ʼಇಂಡಿಯಾʼ ಮೈತ್ರಿಕೂಟದ ಬಲ್ಲಮೂಲಗಳಿಂದ ಲಭ್ಯವಾಗಿದೆ.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ರಾಹುಲ್‌ ಗಾಂಧಿ, ಅಖಿಲೇಶ್‌ ಯಾದವ್‌, ಉದ್ಧವ್‌ ಠಾಕ್ರೆ, ಸ್ಟ್ಯಾಲಿನ್‌ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!