spot_img
Wednesday, January 22, 2025
spot_img

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ವೀಡಿಯೋ ಮೂಲಕ ದಿಢೀರ್‌ ಪ್ರತ್ಯಕ್ಷ | ಮೇ.31 ಕ್ಕೆ ಎಸ್ಐಟಿ ಮುಂದೆ ಹಾಜರು : ಪ್ರಜ್ವಲ್‌

ಜನಪ್ರತಿನಿಧಿ (ಬೆಂಗಳೂರು) : ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಹಾಗೂ ವಿದೇಶದಲ್ಲಿ ಅಜ್ಙಾತರಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಕೊನೆಗೂ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ.

ಒಂದು ತಿಂಗಳ ಬಳಿಕ ವೀಡಿಯೋ ಮೂಲಕ ಪ್ರತ್ಯಕ್ಷರಾದ ಪ್ರಜ್ವಲ್‌ ರೇವಣ್ಣ, ವಿದೇಶದಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ನೀಡದೇ ಇರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. “ನಾನು ವಿದೇಶಕ್ಕೆ ತೆರಳುವುದು ಏ.26 ರಂದೇ ಪೂರ್ವನಿಗದಿಯಾಗಿತ್ತು” ಎಂದು ಹೇಳಿದ್ದಾರೆ.

ವಿದೇಶದಲ್ಲೇ ಇದ್ದುಕೊಂಡು ಮೂರ್ನಾಲ್ಕು ದಿನಗಳ ಬಳಿಕ ಯೂಟ್ಯೂಬ್‌ ಹಾಗೂ ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ತಿಳಿದುಬಂತು. ಈ ಬಳಿಕ ಎಸ್‌ಐಟಿ ಕೂಡ ನೋಟೀಸ್‌ ನೀಡಿದೆ. ಎಸ್‌ಐಟಿ ನೋಟೀಸ್‌ ಗೆ ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಹಾಗೂ ವಕೀಲರ ಮೂಲಕ ಏಳು ದಿನಗಳ ಕಾಲಾವಕಾಶವನ್ನು ಕೇಳಿದ್ದೇನೆ. ಈ ಸಂದರ್ಭದಲ್ಲಿ ಹಿರಿಯ ನಾಯಕರಾದ ರಾಹುಲ್‌ ಗಾಂಧಿ ಸೇರಿ ವಿರೋಧ ಪಕ್ಷದ ನಾಯಕರು ತನ್ನ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಪ್ರಯತ್ನ ಪಟ್ಟರು. ರಾಜಕೀಯದ ಪಿತೂರಿ ಮಾಡುವ ಪ್ರಯತ್ನಪಟ್ಟರು. ಈ ಕಾರಣದಿಂದ ತಾನು ಮಾನಸಿಕವಾಗಿ ಕುಗ್ಗುವ ಹಾಗೆ ಆಯ್ತು, ಡಿಪ್ರೆಶನ್‌ಗೆ ಒಳಗಾಗುವ ಹಾಗಾಯ್ತು ಎಂದು ಅವರು ಹೇಳಿದ್ದಾರೆ.

ಹಾಸನದಲ್ಲಿಯೂ ಕೂಡ ಕೆಲವು ಶಕ್ತಿಗಳು ಕೂಡ ತನ್ನ ವಿರುದ್ಧ ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದ್ದವು ಎಂದು ಹೇಳಿದ ಅವರು, ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದರು ಎಂದು ಹೇಳಿದ್ದಾರೆ.

ಇದೇ ವೇಳೆ ಮೇ.31 ಕ್ಕೆ ಎಸ್ ಐ ಟಿ ಎದುರು ಹಾಜರಾಗಿ, ತನಿಖೆಗೆ ಸಹಕರಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನ್ಯಾಯಾಲಯದ ಮೂಲಕ ಈ ಸುಳ್ಳು ಪ್ರಕರಣದಿಂದ ದೋಷ ಮುಕ್ತನಾಗುವ ನಂಬಿಕೆ ಇದೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ರ, ಕುಮಾರಸ್ವಾಮಿ ಅವರ ಮನವಿಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ತಂದೆ-ತಾಯಿ, ತಾತನಿಗೆ ಕ್ಷಮೆಕೋರುತ್ತೇನೆ, ಜನತೆ, ಜೆಡಿಎಸ್ ಕಾರ್ಯಕರ್ತರಿಗೂ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಹಿರಂಗ ಪತ್ರ ಪ್ರಕಟಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ನೀಡಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!