spot_img
Saturday, December 7, 2024
spot_img

ವಿಶ್ವ ವಿನಾಯಕ ಸಿ.ಬಿ.ಎಸ್.ಇ.ಸ್ಕೂಲ್: ಶಿಕ್ಷಕರ ತರಭೇತಿ ಕಾರ್ಯಾಗಾರ

ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆ ಇಲ್ಲಿನ ಶಿಕ್ಷಕರಿಗೆ ತರಭೇತಿ ಕಾಯಾಗಾರವನ್ನು ಏರ್ಪಡಿಸಲಾಗಿತ್ತು. ಸ್ಕಿಲ್ ಡೆವಲಪ್‌ಮೆಂಟ್ ತರಭೇತುದಾರ ಪ್ರೊಫೆಸರ್ ಕೃಷ್ಣನ್ ಕುಟ್ಟಿ ಇವರು “21 ಸೆಂಚುರಿ ಲರ್ನಿಂಗ್ ಸ್ಕಿಲ್ಸ್ ಮತ್ತು ಕ್ಲಾಸ್ ರೂಮ್ ಮ್ಯಾನೇಜ್‌ಮೆಂಟ್” ವಿಷಯದ ಕುರಿತು ಶಿಕ್ಷಕರಿಗೆ ತರಭೇತಿಯನ್ನು ನೀಡಿದರು.

ತರಗತಿಯಲ್ಲಿ ವಿವಿಧ ಕೌಟುಂಬಿಕ ಹಿನ್ನಲೆಯುಳ್ಳ ಮಕ್ಕಳು, ವಿವಿಧ ಬುದ್ಧಿಮತ್ತೆ ಮಟ್ಟದ ಮಕ್ಕಳು, ವಿವಿಧ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿದ್ದು ಪ್ರತೀ ಮಗುವಿನ ಮನಃ ಸ್ಥಿತಿಯನ್ನು ಅರಿತು ಅವರೊಂದಿಗೆ ಬೆರೆತು ಶಿಕ್ಷಕರು ಮಕ್ಕಳ ಕಲಿಕೆಗೆ ಸಹಕಾರವಾಗಬೇಕು ಎಂದು ತಿಳಿಸಿದರು. ವಿವಿಧ ಘಟನಾವಳಿಗಳನ್ನಾಧರಿಸಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಬಾಂಧ್ಯವ್ಯದ ಕುರಿತು ವಿವರಿಸಿದರು. NEP ಗೆ ಅನುಗುಣವಾಗಿ ಹೊಸ ಶೈಕ್ಷಣಿಕ ವಿಧಾನಗಳನ್ನು ಅಳವಡಿಸಿ ಬೋಧನಾ ಪದ್ದತಿಯನ್ನು ಸುಧಾರಿಸುವ ಕ್ರಮಗಳನ್ನು ತಿಳಿಸಿದರು.

ಕಾಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ, ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್, ಪ್ರಾಂಶುಪಾಲರಾದ ನಿತಿನ್ ಡಿ’ ಆಲ್ಮೇಡಾ, ಶಿಕ್ಷಕ ವೃಂದದವರು ಹಾಗೂ ಆಕ್ಸ್ಫರ್ಡ್ ಎಕ್ಸಿಕ್ಯೂಟಿವ್ ಸುಜಿತ್ ಕುಮಾರ್ ಉಪಸ್ಥಿತರಿದ್ದರು, ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!