Sunday, September 8, 2024

20ಕ್ಕೂ ಅಧಿಕ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಉಡುಪಿ: ಜನಸಾಮಾನ್ಯರ ಬಾಯಲ್ಲಿ ನಿರೂರಿಸುವ ದೇಹಕ್ಕೆ ಪೌಷ್ಠಿಕತೆ ಒದಗಿಸುವ ‘ಹಣ್ಣುಗಳ ರಾಜ’ನೆಂದು ಪ್ರಸಿದ್ಧಿ ಪಡೆದಿರುವ ವಿವಿದ ಬಗೆಯ ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉಡುಪಿ ನಗರದ ದೊಡ್ಡಣ್ಣಗುಡ್ಡೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಮಾವು ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಮಾತನಾಡಿ, ಮಾವು ಮೇಳದಲ್ಲಿ ರೈತರು ನೇರವಾಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲಾಗಿದೆ. ಇಲ್ಲಿ ಮಾರಾಟ ವಾಗುತ್ತಿರುವ ಮಾವು ಸಾವಾಯವ ಪದ್ದತಿಯಲ್ಲಿ ಬೆಳೆದಾಗಿದ್ದು ರಾಸಾಯನಿಕಗಳನ್ನು ಬಳಕೆ ಮಾಡದೇ ಮಾಗಿಸಿ ಮಾವನ್ನು ಹಣ್ಣು ಮಾಡಲಾಗಿರುವ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದರು ಎಂದರು.

ರೈತರು ತಾವು ಬೆಳೆದ ಮಾವನ್ನು ನೇರವಾಗಿ ಮಾರಾಟ ಮಾಡಲು ಮಾವು ಮೇಳವು ಒಂದು ಉತ್ತಮ ವೇದಿಕೆಯಾಗಿದೆ ಎಂದ ಅವರು ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರಕಾರ ಫಾರ್ಮೆರ್ ಫ್ರೋಡ್ಯೂಸರ್ ಒರ್ಗನೈಸೆಷನ್ ಮೂಲಕ, ರೈತರಿಗೆ ಆಗುವಂತಹ ನಷ್ಠವನ್ನು ತಪ್ಪಿಸಿ ಸ್ವತಹ ಅವರೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವ ಉದ್ದೇಶ ಇದೆ ಎಂದರು.

ಕಾರ್ಯಕ್ರಮದಲ್ಲಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ 20 ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 16 ರಿಂದ 19 ರವರೆಗೆ ನಡೆಯಲಿದೆ.

ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾsಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್‌ಸ್ ಸಹಿತ ನಾನ ತಳಿಯ ಒಟ್ಟು ೪೦ ಟನ್‌ಗೂ ಹೆಚ್ಚು ಮಾವು ಮೇಳದಲ್ಲಿ ಲಭ್ಯವಿದೆ.

ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ವಿಶೇಷ ಆಕಷಣೆಯಾಗಿದ್ದು, ಕೆಜಿಗೆ 300 ದರವಿದ್ದು ತೋತಾಪುರಿ ಕೆ.ಜಿಗೆ 50 ರೂ ಕನಿಷ್ಠ ದರದಾದ್ದರೆ, ಹಿಮಮ್ ಪಸಂದ್ ತಳಿಯು ಕೆ.ಜಿ ಯೊಂದಕ್ಕೆ 400 ರೂ ಇದ್ದು ಗರಿಷ್ಠ ತಳಿಯದ್ದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!