spot_img
Sunday, February 15, 2026
spot_img

ವಂಡಾರು: ಶ್ರೀಭುವನೇಶ್ವರಿ ದೇವಳದಲ್ಲಿ ವರ್ಧಂತ್ಯುತ್ಸವ ಸಂಪನ್ನ

ವಂಡಾರು: ಪುರಾತನ ಕಾಲದ ಇತಿಹಾಸವನ್ನು ಹೊಂದಿದ ವಂಡಾರು ಶ್ರೀಭುವನೇಶ್ವರಿ ದೇವಳದ 13 ನೇ ವರ್ಷದ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿದೆ.

ಬೆಳಿಗ್ಗೆ ಕಲಶಾಭಿಷೇಕ,ಸಾಮೂಹಿಕ ಸತ್ಯನಾರಾಯಣ ಪೂಜಾ,ಮಧ್ಯಾಹ್ನ ಮಹಾಪೂಜೆ,ಅನ್ನ ಪ್ರಸಾದ,ಸಂಜೆ ಶ್ರೀಭುವನೇಶ್ವರಿ ಭಜನಾ ಮಂಡಳಿ ವಂಡಾರು, ಶ್ರೀವಿಶ್ವೇಶ್ವರ ಭಜನಾ ಮಂಡಳಿ ಮಾರ್ವಿ,ಶ್ರೀಶಂಕರನಾರಾಯಣ ಭಜನಾ ಮಂಡಳಿ ಆವರ್ಸೆ,ಶ್ರೀಮಾರಿಕಾಂಬ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಿರಾಡಿ ಇವರಿಂದ ನಡೆದ ಭಜನಾ ಕಾರ್ಯಕ್ರಮವು ಮೆರಗು ನೀಡಿದೆ.ರಾತ್ರಿ ರಂಗಪೂಜೆ,ಪ್ರಸಾದ ವಿತರಣೆ ನಡೆಯಿತು.

ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಕೋಶಾಧಿಕಾರಿ ಪೂರ್ಣೀಮಾ ಪೆರ್ಡೂರು ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.ಪರಿಸರದ ಭಜನಾ ತಂಡಗಳಿಗೆ ಭಜನೆ, ಕುಣಿತ, ರಾಗ,ತಾಳದ ಕುರಿತು ಅತ್ಯುತ್ತಮ ಉಚಿತ ತರಭೇತಿ ನೀಡಿದ ಇವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು. ಭಜನಾ ತಂಡಗಳಿಗೆ ಗೌರವ ಸಮರ್ಪಣೆ ನಡೆಯಿತು.

ವಂಡಾರು ಮೂಡುಬೆಟ್ಟು ರವೀಂದ್ರ ಶೆಟ್ಟಿ,ಬೇಬಿ ರವೀಂದ್ರ ಶೆಟ್ಟಿ, ಬೆಂಗಳೂರು ಶ್ರೀಭುವನೇಶ್ವರಿ ಪ್ರೊಜೇಕ್ಟ್ಸ್ ಪ್ರೈ ಲಿ.ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ ಶೆಟ್ಟಿ ವಂಡಾರು,ಪ್ರವೀಣ ಶೆಟ್ಟಿ ವಂಡಾರು ಹಾಗೂ ಮನೆಯವರು, ಸುರೇಶ್ ಶೆಟ್ಟಿ ವಂಡಾರು,ಶರತ್ ವಂಡಾರು, ತಂತ್ರಿ ಗಿರೀಶ ಅಡಿಗ ಕಿರಾಡಿ, ವೇ.ಮೂ.ಪರಮೇಶ್ವರ ಭಟ್ ವಂಡಾರು, ಶಂಕರನಾರಾಯಣ ಭಟ್ ವಂಡಾರು, ಆಡಳಿತ ಮಂಡಳಿಯವರು, ಊರ ಪರವೂರ ಭಕ್ತಾಧಿಗಳು ಪಾಲ್ಗೊಂಡಿದ್ದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!