spot_img
Wednesday, January 22, 2025
spot_img

ಧಾರ್ಮಿಕ ಪ್ರವಚನ, ಭಕ್ತಿ ಭಾವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಮ್ಯತೆ-ವಿಶ್ವವಲ್ಲಭ ತೀರ್ಥ ಶ್ರೀಪಾದರು

ಕುಂದಾಪುರ: ಯಾತ್ರ ಸ್ಥಳಗಳು ಒಂದೊಕ್ಕೊಂದು ವಿಭಿನ್ನವಾಗಿದೆ. ತೀರ್ಥಕ್ಷೇತ್ರದ ಯಾತ್ರೆಯಿಂದ ಪುರಾಣ ಕಥೆಗಳ ಮೌಲ್ಯವನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾಗಿ ಪುರಾಣ ಕಥೆಗಳು ಹೆಣೆದಿರುತ್ತದೆ. ಈಗಿನ ವಿದ್ಯಾಮಾನಗಳಿಗೂ ಪುರಾಣಗಳಿಗೂ ಹೆಚ್ಚು ಸಂಬಂಧವಿರುವ ಹಲವು ಕಥೆಗಳು ತೀರ್ಥಕ್ಷೇತ್ರದ ಕಥೆಗಳಿಂದ ಲಭ್ಯವಾಗುತ್ತದೆ. ಯಾತ್ರಾ ದಿನದ ಅನುಭವದ ಸವಿಸ್ತಾರವಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೂ ಪುರಾಣ ಕಥನದ ಭಕ್ತಿ ಭಾವಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ಹೆಚ್ಚು ಸಾಮ್ಯತೆ ಇದೆ ಎಂದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆಯ ಸಂಯೋಜನೆಯಲ್ಲಿ ಸಿನ್ಸ್ ೧೯೯೯ ಶ್ವೇತಯಾನದ 28ನೇಯ ಕಾರ್ಯಕ್ರಮವಾಗಿ ಮೇ 16ರಂದು ಕುಂದಾಪುರ ಹಂಗಳೂರು ಶ್ರೀ ರಾಮಚಂದ್ರ ವರ್ಣರ ಮನೆಯಲ್ಲಿ ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಪ್ರವಚನ ಹಾಗೂ ಯಶಸ್ವೀ ಕಲಾವೃಂದದ ಯಕ್ಷಗಾನವೈಭವ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮೀಜಿ ಮಾತನ್ನಾಡಿದರು.

ಉದ್ಯಮಿ ರಾಮಚಂದ್ರ ವರ್ಣ, ಗುರುಗಳಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ, ದರ್ಶನ್ ಗೌಡ, ಪಂಚಮಿ ವೈದ್ಯ, ಕಿಶನ್ ಕುಂದಾಪುರ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!