Wednesday, September 11, 2024

ನಿರ್ಮಲ ಮನಸ್ಸುಗಳಲ್ಲಿ ಸಫಲತೆಯ ಬೀಜ ಬಿತ್ತಬೇಕು: ಡಾ. ತಲ್ಲೂರು ಶಿವರಾಮ ಶೆಟ್ಟಿ

ರಜಾರಂಗು: 28 ದಿನಗಳ ಶಿಬಿರ ಸಮಾರೋಪ

ತೆಕ್ಕಟ್ಟೆ: ಮಕ್ಕಳ ಮನಸ್ಸುಗಳು ಕಾಲಿ ಪುಟದ ಹಾಗೆ. ನಿರ್ಮಲ ಮನಸ್ಸುಗಳಲ್ಲಿ ಸಫಲತೆಯ ಬೀಜ ಬಿತ್ತಬೇಕು. ಅದು ಮೊಳಕೆ ಒಡೆದು ಭವಿಷ್ಯದಲ್ಲಿ ಹೆಮ್ಮರವಾಗಿ ಸಮಾಜವನ್ನು ಬೆಳಗಬೇಕಾದರೆ ಇಂತಹ ಶಿಬಿರದಿಂದ ಸಾಧ್ಯ. ರಜಾರಂಗು ಶಿಬಿರ ಹಲವು ವರ್ಷಗಳಿಂದ ಪರಿಸರದ ಮಧ್ಯದಲ್ಲಿ ನೆರವೇರಿಸಿಕೊಂಡು ಬಂದಿದೆ. ನೀನಾಸಂ, ಸಾಣೆಹಳ್ಳಿ, ರಂಗಾಯಣದಲ್ಲಿನ ನುರಿತ ರಂಗ ನಿರ್ದೇಶಕರಿಂದ ಈ ಶಿಬಿರ ಸಂಪನ್ನಗೊಂಡಿರುವುದು ಸಣ್ಣ ವಿಷಯವಲ್ಲ. ಇಂತಹ ದೊಡ್ಡ ಮಟ್ಟದ ಶಿಬಿರವನ್ನು ಏರ್ಪಡಿಸಿಕೊಂಡು ಸುಧೀರ್ಘ ಕಾಲ ನಡೆಸುವ ಸಂಸ್ಥೆಯನ್ನು ಶ್ಲಾಘಿಸಲೇ ಬೇಕು. ಸಮಾಜಕ್ಕೆ ದೊಡ್ಡ ಕೊಡುಗೆಯಾದ ಯಶಸ್ವೀ ಕಲಾವೃಂದ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ರಂಗ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ ಹಾಗೂ ಅಶೋಕ್ ಮೈಸೂರು ಇವರನ್ನು ಅಭಿವಂದಿಸಿ ಮಾತನ್ನಾಡಿದರು.

ಶ್ವೇತಸಂಜೆ-೨೬ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಆಯೋಜಿಸಿಕೊಂಡಿರುವ ರಜಾರಂಗು-೨೪ ಶಿಬಿರದ ಮುಕ್ತಾಯದಲ್ಲಿ ತ್ರಿವಳಿ ನಾಟಕೋತ್ಸವದಲ್ಲಿನ ಸಮಾರೋಪ ಸಮಾರಂಭದಲ್ಲಿ ಮೇ ೮ರಂದು ತಲ್ಲೂರು ಶಿವರಾಮ ಶೆಟ್ಟಿ ಮಾತನ್ನಾಡಿದರು.

ರಂಗ ಚಟುವಟಿಕೆಯಿಂದ ಕರಾವಳಿ ಭಾಗದಲ್ಲಿ ಜೀವಂತವಾಗಿರುವ ಸಂಸ್ಥೆ ಯಶಸ್ವಿ ಕಲಾವೃಂದ. ಹೊಸ ಹೊಸ ರಂಗ ಸಂಯೋಜನೆಯೊಂದಿಗೆ ರಂಗವನ್ನು ಹಸಿರಾಗಿಸಿಕೊಂಡು, ತನ್ನದೇ ಛಾಪಿನೊಂದಿಗೆ ಸಮಾಜಮುಖಿಯಾಗಿ ಕಾಣಿಸಿಕೊಂಡು, ಒಂದಿಷ್ಟು ಮಕ್ಕಳನ್ನು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆಯಾಗಿಸಿದ ಇತ್ತೀಚಿನ ಮುನ್ನಡೆಯ ಸಂಸ್ಥೆ ಯಶಸ್ವೀ ಕಲಾವೃಂದ. ಇಂತಹ ಸಂಸ್ಥೆಯಿಂದ ಮಕ್ಕಳ ಶ್ರೇಯೋಭಿವೃದ್ಧಿ ಕಾರ್ಯ ನೂರ್ಮಡಿಯಾಗಿಸಿದೆ. ತಲ್ಲೂರು ಶಿವರಾಮ ಶೆಟ್ಟಿ ಇಂತಹ ಸಂಸ್ಥೆಯ ನಿಕಟವರ್ತಿಗಳು. ಸದಾ ಸಂಸ್ಥೆಯ ಸತ್ಕಾರ್ಯಗಳನ್ನು ಗಮನಿಸುತ್ತಿರುವವರು. ರಂಗಭೂಮಿಯ ಕಲಾವಿದರಾಗಿದ್ದ ಶಿವರಾಮ ಶೆಟ್ಟಿಯವರನ್ನು ಅಕಾಡೆಮಿ ಅಧ್ಯಕ್ಷರಾದ ನೆಲೆಯಲ್ಲಿ ಇಲ್ಲಿನ ರಂಗವೇದಿಕೆಯಲ್ಲಿ ಅಭಿನಂದಿಸುವುದು ಹೆಚ್ಚು ಸ್ತುತ್ಯರ್ಹ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್ ತಲ್ಲೂರು ಶಿವರಾಮ ಶೆಟ್ಟಿಯವರನ್ನು ಅಭಿನಂದಿಸಿ ಮಾತನ್ನಾಡಿದರು.

ಗೆಳೆಯರ ಬಳಗ ಕಾರ್ಕಡದ ತಾರಾನಾಥ ಹೊಳ್ಳ, ಸದಾಶಿವ ರಾವ್ ಅರೆಹೊಳೆ, ನರೇಂದ್ರ ಕುಮಾರ್ ಕೋಟ, ಸಚಿನ್ ಅಂಕೋಲ, ಕಾರ್ಯಾಧ್ಯಕ್ಷರಾದ ಗೋಪಾಲ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಬಿ.ವಿ. ಕಾರಂತ್ ರಚನೆಯ ನಾಟಕ ಹಡ್ಡಾಯಣ ಅಶೋಕ್ ಶೆಟ್ಟಿ ಮೈಸೂರು ನಿರ್ದೇಶನದಲ್ಲಿ ಅದ್ಭುತವಾಗಿ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!