spot_img
Saturday, December 7, 2024
spot_img

ಶ್ರೇಷ್ಠಾತಿಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ-ಕೊಂಡದಕುಳಿ ರಾಮಚಂದ್ರ ಹೆಗಡೆ

ಕೋಟ: ದಶಕ ದಶಕಗಳ ಕಾಲ ಒಂದು ಮೇಳವನ್ನು ಜವಾಬ್ದಾರಿಯುತವಾಗಿ ಮುನ್ನೆಡೆಸಿದ ಕೀರ್ತಿ ಕೀರ್ತಿಶೇಷ ಸುಭ್ರಹ್ಮಣ್ಯ ಧಾರೇಶ್ವರರದ್ದು.ಅದೂ ಹೊಸ ಪ್ರಸಂಗಗಳನ್ನು ಯಕ್ಷಗಾನ ಚೌಕಟ್ಟಿನಲ್ಲಿ ಯಶಸ್ವಿಯಾಗುವಲ್ಲಿ ಹೆಸರು ಪಡೆದ ಸಮರ್ಥ ರಂಗ ನಿರ್ದೇಶಕ. ಒಬ್ಬ ಕಲಾವಿದನಾಗಿದ್ದು ಕಲಾವಿದರ ಬದುಕಿಗಾಗಿಯೇ ತಾಳಮದ್ದಲೆ ಸಪ್ತಾಹ, ಯಕ್ಷಗಾನ ಸಪ್ತಾಹದಂತ ಕಾರ್ಯಕ್ರಮವನ್ನು ಸಂಯೋಜಿಸಿದ ಯೋಗ್ಯ ಸಂಘಟಕ. ಅನುಭವಿ ಭಾಗವತ ಶ್ರೇಷ್ಠ , ಸ್ನೇಹ ಜೀವಿ ಧಾರೇಶ್ವರ ಅಪಾರ ಅಭಿಮಾನಿಗಳನ್ನು ಅಗಲಿದ್ದು ನಿಜಕ್ಕೂ ಅಘಾತಕಾರಿ ವಿಚಾರ. ದಿವಂಗತ ಧಾರೇಶ್ವರರ ಆತ್ಮಕ್ಕೆ ಚಿರಶಾಂತಿ ಲಬಿಸಲೆಂದು ಹಿರಿಯ ಯಕ್ಷಗಾನ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಹಾರೈಸಿದರು.

ಇತ್ತೀಚೆಗೆ ನಿಧನರಾದ ಕಲಾಕೇಂದ್ರದ ಶಿಷ್ಯ, ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ನುಡಿನಮನ ಕಾರ್ಯಕ್ರಮವು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯವರ ಸದಾನಂದ ರಂಗಮಂಟಪದಲ್ಲಿ ನಡೆಯಿತು.

ಸಭಾದ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ ಕುಂದರ್ ವಹಿಸಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಕಲಾಪ್ರೋತ್ಸಾಕ ವೆಂಕಟೇಶ ಭಟ್ಟ, ಪ್ರಾಚಾರ್ಯ ಸದಾನಂದ ಐತಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ಐರೊಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರೆ ರಾಮಚಂದ್ರ ಐತಾಳ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!