spot_img
Saturday, December 7, 2024
spot_img

ಬಿ. ಬಿ. ಹೆಗ್ಡೆ ಕಾಲೇಜು: ಪ್ರತಿಭಾ ದಿನಾಚರಣೆ ಸಮಾರೋಪ

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಾದ ಕುಂದಾಪುರದ ವಸಂತನಾಟ್ಯಲಯದ ನೃತ್ಯ ತರಬೇತುದಾರರಾದ ಶ್ರೀಮತಿ ಪ್ರವಿತಾ ಅಶೋಕ್, ಮಂದರ್ತಿ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕ ಪ್ರಭಾಕರ್ ಶೆಟ್ಟಿಗಾರ್ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಗೀತಾ ಶೆಟ್ಟಿ ಉಪಸ್ಥಿತರಿದ್ದು, ಅನಿಸಿಕೆಯ ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಶ್ರೀಮತಿ ದೀಪಿಕಾ ಜಿ. ಉಪಸ್ಥಿತರಿದ್ದರು.

ಕಾಲೇಜಿನ ವಾಣಿಜ್ಯ ಉಪನ್ಯಾಸಕ ಸತೀಶ್ ಶೆಟ್ಟಿ ಬಹುಮಾನಿತರ ಪಟ್ಟಿ ವಾಚಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸ್ವಾತಿ ರಾವ್ ವಂದಿಸಿ, ವಾಣಿಜ್ಯ ಉಪನ್ಯಾಸಕಿ ದೀಪಾ ಪೂಜಾರಿ ನಿರೂಪಿಸಿದರು.

ಈ ಸಂದರ್ಭ ಬಹುಮಾನ ವಿತರಣೆ ನಡೆಸಲಾಯಿತು. ಅತ್ಯುತ್ತಮ ನಿರೂಪಣೆ ಶೃದ್ಧಾ, ದ್ವಿತೀಯ ಬಿಬಿ‌ಎ, ಅತ್ಯುತ್ತಮ ಗುಂಪು ನೃತ್ಯ ಬಹುಮಾನ ದ್ವಿತೀಯ ಬಿಸಿ‌ಎ (ಬಿ), ವೈಯಕ್ತಿಕ ಪ್ರತಿಭೆ – ಬ್ರಾಹ್ಮಿ ಪ್ರಥಮ ಬಿಸಿ‌ಎ (ಎ), ಒಟ್ಟು ಸಮಗ್ರ ಪುರಸ್ಕಾರವನ್ನು ಕ್ರಮವಾಗಿ ತೃತೀಯ ಬಿ.ಕಾಂ. (ಬಿ), ತೃತೀಯ ಬಿ.ಕಾಂ. (ಸಿ), ದ್ವಿತೀಯ ಬಿಸಿ‌ಎ (ಎ), ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!