Sunday, September 8, 2024

ಕಾಂಗ್ರೆಸ್‌ನ ಮಹಾಲಕ್ಷ್ಮೀ ಗ್ಯಾರಂಟಿ ಯೋಜನೆ ಮಹಿಳೆಯರ ಬದುಕನ್ನು ಸುಧಾರಿಸಲಿದೆ : ಸೋನಿಯಾ ಭರವಸೆ

ಜನಪ್ರತಿನಿಧಿ (ನವದೆಹಲಿ) :  ಈ “ಕಷ್ಟದ ಸಮಯದಲ್ಲಿ” ಕಾಂಗ್ರೆಸ್ “ಗ್ಯಾರಂಟಿ”ಗಳು ಮಹಿಳೆಯರ ಪರಿಸ್ಥಿತಿಯನ್ನು ಬದಲಾಯಿಸುತ್ತವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ಇಂದು(ಸೋಮವಾರ) ಹೇಳಿದ್ದಾರೆ.

ಲೋಕಸಭಾ ಚುನಾವಣೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಗ್ಯಾರಂಟಿಗಳ ಬಗ್ಗೆ ಸೋನಿಯಾ ಗಾಂಧಿ ಮಾತನಾಡಿರುವ ವಿಡಿಯೋವನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

“ತೀವ್ರ ಬಿಕ್ಕಟ್ಟಿನ” ಹಿನ್ನೆಲೆಯಲ್ಲಿ ದೇಶದ ಮಹಿಳೆಯರು ಕಷ್ಟದ ಸಮಯವನ್ನು ಎದುರಿಸುತ್ತಿದ್ದು, ಪಕ್ಷದ ‘ಮಹಾಲಕ್ಷ್ಮಿ ಯೋಜನೆ’ ಮಹಿಳೆಯರ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

“ನನ್ನ ಪ್ರೀತಿಯ ಸಹೋದರಿಯರೇ, ಸ್ವಾತಂತ್ರ್ಯ ಹೋರಾಟದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಅಪಾರ ಕೊಡುಗೆ ನೀಡಿದ್ದಾರೆ. ಆದರೆ, ಇಂದು ನಮ್ಮ ಮಹಿಳೆಯರು ತೀವ್ರ ಹಣದುಬ್ಬರದ ನಡುವೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲು ಕ್ರಾಂತಿಕಾರಿ ಗ್ಯಾರಂಟಿಗಳು ಕಾಂಗ್ರೆಸ್ ಬಂದಿದೆ ಎಂದು “ಸೋನಿಯಾ ಗಾಂಧಿ ತಿಳಿಸಿದ್ದಾರೆ.

“ಕಾಂಗ್ರೆಸ್‌ನ ‘ಮಹಾಲಕ್ಷ್ಮಿ’ ಯೋಜನೆಯು ಬಡ ಕುಟುಂಬದ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ನೀಡಲಿದೆ ಎಂದು” ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ನ “ಗ್ಯಾರಂಟಿ” ಯೋಜನೆಗಳು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳ ಜೀವನವನ್ನು ಬದಲಾಯಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ದಕ್ಷಿಣದ ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.

ಇನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಾಯಿಯ ಸಂದೇಶವನ್ನು ಹಂಚಿಕೊಂಡಿದ್ದು, “ಬಡ ಕುಟುಂಬದ ಮಹಿಳೆಯರೇ ನೆನಪಿಸಿಕೊಳ್ಳಿ – ನಿಮ್ಮ ಒಂದು ಮತದಿಂದ ನಿಮ್ಮ ಖಾತೆಯಲ್ಲಿ ವರ್ಷಕ್ಕೆ 1 ಲಕ್ಷ ರೂ. ಜಮೆಯಾಗದೆ ಎಂದು ಬರೆದುಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!