Saturday, October 12, 2024

ಆರು ತಿಂಗಳ ಬಳಿಕ ಕೇದಾರನಾಥ ದರ್ಶನ | ಭಕ್ತರ ಹರ್ಷೋದ್ಘಾರ, ಎಲ್ಲೆಲ್ಲೂ ಕೇಳಿಸಿದ ಹರಹರ ಮಹಾದೇವ್‌ !

ಜನಪ್ರತಿನಿಧಿ (ರುದ್ರಪ್ರಯಾಗ, ಉತ್ತರಾಖಂಡ):  ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಧಾಮ ಇಂದು (ಶುಕ್ರವಾರ) ಮುಂಜಾನೆ 7 ಗಂಟೆಗೆ ಭಕ್ತರಿಗೆ ದರ್ಶನಕ್ಕಾಗಿ ತೆರೆಯಲಾಗಿದೆ.

ಬರೋಬ್ಬರಿ ಆರು ತಿಂಗಳ ನಂತರ ಧಾರ್ಮಿಕ ವಿಧಿವಿಧಾನಗಳು ಮತ್ತು ಸ್ತೋತ್ರಗಳ ವಿಧ್ಯುಕ್ತ ಪಠಣದ ಮೂಲಕ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಸ್ತೋತ್ರ ಪಠಣ, ಭಕ್ತರ ಹರ್ಷೋದ್ಘಾರ ಮೂಲಕ ದೇವಸ್ಥಾನದ ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ನೆರೆದಿದ್ದ ಭಕ್ತರ ಗುಂಪಿನಿಂದ ‘ಹರ ಹರ ಮಹಾದೇವ್’ ಘೋಷಣೆಗಳು ಮೊಳಗಿ ಬಂದವು. ದೇಶದ ಅತ್ಯಂತ ಪವಿತ್ರವಾದ ಪೂಜಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಭಗವಾನ್ ಶಿವನ ದಾಮವನ್ನು ಸುಮಾರು 40 ಕ್ವಿಂಟಾಲ್ ಹೂವುಗಳ ದಳಗಳಿಂದ ಅಲಂಕಾರ ಮಾಡಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಪತ್ನಿ ಗೀತಾ ಧಾಮಿ ಅವರೊಂದಿಗೆ ಬಾಬಾ ಕೇದಾರನಾಥನ ದರ್ಶನಕ್ಕೆ ಆಗಮಿಸಿದ್ದರು. ವಿಶೇಷವಾಗಿ ಇಂದು(ಶುಕ್ರವಾರ) ಅಕ್ಷಯ ತೃತೀಯ ಶುಭ ಮೂಹೂರ್ತದಲ್ಲಿ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಯ ಬಾಗಿಲು ತೆರೆಯಲಾಗಿದ್ದು, ಮೇ 12 ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಾಗುತ್ತದೆ.

ಕೇದಾರನಾಥ ಧಾಮದ ಬಾಗಿಲು ತೆರೆಯುತ್ತಿದ್ದಂತೆ, ಹೆಲಿಕಾಪ್ಟರ್‌ಗಳು ದೇವಸ್ಥಾನದ ಮೇಲೆ ದಳಗಳನ್ನು ಸುರಿಸಿದವು. ದೇಶದ ಅತಿ ಎತ್ತರದ ಪ್ರದೇಶದಲ್ಲಿರುವ ದೇವಾಲಯಗಳು ಪ್ರತಿ ವರ್ಷ ಆರು ತಿಂಗಳ ಕಾಲ ಮುಚ್ಚಲ್ಪಡುತ್ತವೆ, ಬೇಸಿಗೆಯಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆರೆಯಲಾಗುತ್ತದೆ. ಚಳಿಗಾಲದ ಆರಂಭದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಮುಚ್ಚಲಾಗುತ್ತದೆ.

ಇನ್ನು, ಚಾರ್ ಧಾಮ್ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಲಾಗಿದೆ. ಆದ್ದರಿಂದ, ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗಿ, ಗಂಗೋತ್ರಿ ಕಡೆಗೆ ಸಾಗಿ ಕೇದಾರನಾಥಕ್ಕೆ, ಮತ್ತು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕೇದಾರನಾಥ ದೇವಸ್ಥಾನವು ಈ ಅಕ್ಷಯ ತೃತೀಯದಲ್ಲಿ ಭಕ್ತರಿಗಾಗಿ ತೆರೆಯುತ್ತದೆ. ಹವಾಮಾನವನ್ನು ಅವಲಂಬಿಸಿ ನವೆಂಬರ್ 3 ಅಥವಾ ಕಾರ್ತಿಕ ಹುಣ್ಣಿಮೆ ದಿನವಾದ ನವೆಂಬರ್ 15 ಅಥವಾ ಹಿಂದಿ ಭಾಷಿಕರ ಭಾಯಿ ದೂಜ್, ನವೆಂಬರ್ 20 ರಂದು ತಾತ್ಕಾಲಿಕವಾಗಿ ಮುಚ್ಚಲ್ಪಡುತ್ತದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!