spot_img
Thursday, December 5, 2024
spot_img

ಉಡುಪಿ : ಜೀವರಕ್ಷಕ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಪ್ರವಾಸಿಗರ ತಂಡ

ಜನಪ್ರತಿನಿಧಿ (ಉಡುಪಿ) : ಬೀಚ್‌ನಲ್ಲಿ ನಿಯೋಜನೆಗೊಂಡಿದ್ದ ಜೀವರಕ್ಷಕ ದಳದ ಸಿಬ್ಬಂದಿ ಮೇಲೆ ಆರು ಮಂದಿ ಪ್ರವಾಸಿಗರ ತಂಡವೊಂದ ಹಲ್ಲೆ ಮಾಡಿರುವ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ. ಸಮುದ್ರದ ಪ್ರಕ್ಷುಬ್ಧತೆಯ ಬಗ್ಗೆ ಲೈಫ್‌ಗಾರ್ಡ್‌ ಪದೇ ಪದೆ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ ಪ್ರವಾಸಿಗರು ಈಜುವುದನ್ನು ಮುಂದುವರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಉದ್ಯಾವರ-ಪಿತ್ರೋಡಿಯ ಜೀವರಕ್ಷಕ ತೇಜ ಕೋಟ್ಯಾನ್ ಅವರು ಅಪಾಯಕಾರಿ ಅಲೆಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಿದರೂ, ಆ ಪ್ರವಾಸಿಗರ ತಂಡ ಅದನ್ನು ನಿರ್ಲಕ್ಷಿಸಿ ಅಪಾಯದ ವಲಯದಲ್ಲಿ ಈಜುವುದಕ್ಕೆ ಮುಂದಾಗಿದೆ. ಈಜುವುದಕ್ಕೆ ಮುಂದೆ ಹೋಗಬೇಡಿ ಎಂದು ಜೀವರಕ್ಷಕದಳ ಸಿಬ್ಬಂದಿ ಹೇಳಿದ್ದರೂ ಕೂಡ ಅವರ ಮಾತನ್ನು ನಿರ್ಲಕ್ಷಿಸಿದ ಆ ಪ್ರವಾಸಿಗರ ತಂಡ ಅವರ ಮೇಲೆ ಹಲ್ಲೆ ಮಾಡಿದೆ.

ಸ್ಥಳದಲ್ಲಿದ್ದ ಇತರ ಜೀವರಕ್ಷಕರು ಮತ್ತು ಗೃಹರಕ್ಷಕರು ದಾಳಿಕೋರರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಕೆಎ 04 ಎಡಿ 8286 ನೋಂದಣಿ ಸಂಖ್ಯೆಯ ಸ್ವಿಫ್ಟ್ ಮಾರುತಿ ಕಾರಿನಲ್ಲಿ ಅವರು ಪರಾರಿಯಾಗಿದ್ದಾರೆ. ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆಂದು ತಿಳಿದುಬಂದಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!