Saturday, October 12, 2024

ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕದ ವಿಶಿಷ್ಟ ಸಾಧನೆ

ಮೂಡುಬಿದ್ರೆ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಪ್ರೌಢಶಾಲೆಯು 100 ಶೇಕಡಾ ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 51 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಇಶಾನ್ (619), ಮನೀಷಾ ಎನ್ (618), ಮಾನ್ಯ ಎನ್ ಪೂಜಾರಿ (617), ಋತುರಾಜ್ ರಾಮಕೃಷ್ಣ (617), ಮುರುಗೇಶ್ ಬಿರಾದರ್ (616), ಗೋಪಾಲ್ ಕೆಂಚಪ್ಪ(617), ಮಲ್ಲಿಕಾರ್ಜುನ ರಾಮಲಿಂಗಯ್ಯ (614), ಅನ್ನಪೂರ್ಣ ಕಾಮತ್ (612), ಪ್ರಣೀತಾ (612), ಭೂಮಿಕಾ (612), ಗೋಪಾಲ ಪರಮಾನಂದ (611), ಲಕ್ಷ್ಮಿ ಹನಮಂತ ( 611), ಅರ್ಪಿತಾ (610), ಪ್ರಜ್ವಲ್ ಗಣಪತಿ(610), ಸುಪ್ರೀಯಾ ಮಹಾಂತೇಶ್ (610) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.

15 ವಿದ್ಯಾರ್ಥಿಗಳು 610ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 92 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ, 189 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 277 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು.

ಇಬ್ಬರು ವಿದ್ಯಾರ್ಥಿಗಳು ನಾಲ್ಕು ವಿಷಯಗಳಲ್ಲಿ ಶೇ100 ಪಡೆದಿದ್ದು, 5 ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ಶೇ100 ಅಂಕ ಪಡೆದಿದ್ದಾರೆ. 25 ವಿದ್ಯಾರ್ಥಿಗಳು ಎರಡು ವಿಷಯಗಳಲ್ಲಿ, 101 ವಿದ್ಯಾರ್ಥಿಗಳು ಒಂದು ವಿಷಯಗಳಲ್ಲಿ ಶೇ 100 ಅಂಕ ಪಡೆದಿದ್ದಾರೆ.
ಪ್ರಥಮ ಭಾಷೆ ಕನ್ನಡದಲ್ಲಿ 12, ದ್ವಿತೀಯ ಭಾಷೆ ಕನ್ನಡದಲ್ಲಿ 17, ತೃತೀಯ ಭಾಷೆ ಕನ್ನಡದಲ್ಲಿ 15, ದ್ವಿತೀಯ ಭಾಷೆ ಇಂಗ್ಲಿಷ್ 4, ಪ್ರಥಮ ಭಾಷೆ ಸಂಸ್ಕøತ 18, ತೃತೀಯ ಭಾಷೆ ಹಿಂದಿಯಲ್ಲಿ 29, ತೃತೀಯ ಭಾಷೆ ಸಂಸ್ಕøತದಲ್ಲಿ 11, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!