spot_img
Wednesday, April 1, 2026
spot_img

ಮಾರಣಕಟ್ಟೆ: ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಮನೆಯಲ್ಲಿ ನಡೆದ ಮಾರಣಕಟ್ಟೆ ಎರಡು ಮೇಳಗಳ ಕೂಡಾಟದಲ್ಲಿ ಮಾರಣಕಟ್ಟೆ ಮೇಳದ ಕಲಾವಿದರಾದ ಉಪ್ಪುಂದ ನಾಗೇಂದ್ರ ರಾವ್ ಹಾಗೂ ಉದಯ ಮೆಂಡನ್ ಕೋಟ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಯಕ್ಷಗಾನಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ. ರಾತ್ರಿಯಿಂದ ಬೆಳಿಗ್ಗೆಯ ತನಕ ಯಕ್ಷಗಾನವನ್ನು ನೋಡಿ ಆನಂದಿಸುತ್ತೇವೆ. ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸೋಣ, ಕಲಾವಿದರನ್ನು ಗೌರವಿಸೋಣ ಎಂದರು.

ವೇದಿಕೆಯಲ್ಲಿ ಶ್ರೀಧರ ಮಂಜರು, ನಾಗರಾಜ ಮಂಜರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಕೌಟೆಂಟ್ ನಾರಾಯಣ ಶೆಟ್ಟಿ, ಅಮಾಸೆಬೈಲು ಶಂಕರ ಐತಾಳ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!