spot_img
Wednesday, April 1, 2026
spot_img

 ಸಾವಿಷ್ಕಾರ್-24 ರಂಗೇರಿಸಿದ ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು

Kundapura: ಎಂಐಟಿ ಮೂಡ್ಲಕಟ್ಟೆ ಸಾವಿಷ್ಕಾರ್ -24 ಅಂಗವಾಗಿ ಪ್ರಖ್ಯಾತ ಗಾಯಕ ಚಂದನ್ ಶೆಟ್ಟಿ ಅವರು ತಮ್ಮ ಕನ್ನಡ ರ್ಯಾಪ್ ಹಾಡುಗಳ ಮೂಲಕ ನೆರೆದ ಜನ ಸಮೂಹವನ್ನು  ಮಂತ್ರ ಮುಗ್ಧರಾಗಿಸಿದರು.  ತಮ್ಮ  ಶೈಲಿಯಲ್ಲಿ ಉತ್ತಮ ಹಿಡಿತವಿರುವ ಅವರು ನೆರೆದಿದ್ದ ವಿದ್ಯಾರ್ಥಿವೃಂದಕ್ಕೆ ಹಾಡು, ನೃತ್ಯದ ಮೂಲಕ  ಅವಿಸ್ಮರಣೀಯ ದಿನವಾಗುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಿಗೆ ಹಾಡಿದ ಸರಿಗಮಪ ಖ್ಯಾತಿಯ ಜ್ಯೂರಿ  ಮೆಂಬರ್  ಶಶಿಕಲಾ ಸುನಿಲ್, ಸರಿಗಮಪ-20 ವಿನ್ನರ್ ದರ್ಶನ್ ನಾರಾಯಣ್ ರವರು ಪ್ರೇಕ್ಷಕರನ್ನು ರಂಜಿಸಿದರು.

ಎರಡನೆಯ ದಿನದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಜಾನಪದ ಶೈಲಿಯಲ್ಲಿ ತಮ್ಮದೇ ಆದ ಚಾಪು  ಮೂಡಿಸಿದ ಹೆಸರಾಂತ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ತಂಡದವರು. ತಾವೇ ಬರೆದ ಗೀತೆಗಳನ್ನ ಕೂಡಾ ಹಾಡಿ ಜನರನ್ನು ರಂಜಿಸಿದರು. ಸಾವಿಷ್ಕಾರ್ -24 ರ ಎರಡು ದಿನದ ಸಂಜೆಯ ಕಾರ್ಯಕ್ರಮವು ರಂಜನೀಯವಾಗಿ ಮೂಡಿ ಬಂದಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!