spot_img
Wednesday, April 1, 2026
spot_img

ಪ್ರಜ್ವಲ್‌ಗೆ ಸಹಕರಿಸಿದವರು ಯಾರೆಂದು ಸಿಎಂ ಫೋನ್‌ ಟ್ರ್ಯಾಪ್‌ ಮಾಡಿದರೇ ತಿಳಿಯುತ್ತದೆ : ಅಶೋಕ್‌ ಆರೋಪ

ಜನಪ್ರತಿನಿಧಿ (ಬೀದರ್‌) : ಸಿಎಂ ಸಿದ್ದರಾಮಯ್ಯ ಅವರ ಫೋನ್‌ ಟ್ರ್ಯಾಪ್‌ ಮಾಡಿಸಿದರೇ ಪ್ರಜ್ವಲ್‌ ರೇವಣ್ಣ ಅವರಿಗೆ ಸಹಕರಿಸಿದವರು ಯಾರೆಂದು ತಿಳಿಯುತ್ತದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಪತ್ರಕರ್ತರಿಗೆ ಸ್ಪಂದಿಸಿ ಮಾತನಾಡಿದ ಅವರು, ʼಪ್ರಜ್ವಲ್‌ ರೇವಣ್ಣನನ್ನು ಬಿಟ್ಟವರು ಸಿದ್ದರಾಮಯ್ಯನವರು, ಪ್ರಶ್ನೆ ಮೋದಿಯವರಿಗೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಪೊಲೀಸ್‌ನವರು ಇದ್ದಾರಾ ಅಥವಾ ಸತ್ತಿದ್ದಾರಾ ? ಇಂಟೆಲಿಜೆನ್ಸ್‌ನವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರಕರಣದಲ್ಲಿ ರಾಜ್ಯ ಸರ್ಕಾರದ ತಪ್ಪು ಕೇಂದ್ರದ ಮೇಲೆ ಹೊರಿಸುತ್ತಿರುವುದು? ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ ಅಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಬರೆದುಕೊಡಲಿ. ದೇವೇಗೌಡರಿಗೆ ಅಪಮಾನ ಮಾಡಬೇಕೆಂಬ ಸ್ಕೀಮ್‌ ಇದು ಎಂದು ಅವರು ಆರೋಪಿಸಿದರು.

ಪ್ರಜ್ವಲ್‌ ರೇವಣ್ಣನನ್ನು ಬಂಧಿಸಲು ರಾಜ್ಯ ಸರ್ಕಾರ ಹಿಂದೇಟು ಏಕೆ ಹಾಕುತ್ತಿದೆ. ತಪ್ಪು ಮಾಡಿದರೇ ಬಂಧಿಸಬೇಕು. ಇಡೀ ಪ್ರಕರಣ ನೋಡಿದರೇ ಪ್ರಜ್ವಲ್‌ ರೇವಣ್ಣನನ್ನು ವಿದೇಶಕ್ಕೆ ಸಿದ್ದರಾಮಯ್ಯನವರೇ ಕಳಿಸಿದ್ದಾರೆ ಎಂದು ಆರೋಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!