Friday, May 17, 2024

ಉಡುಪಿ ಚಿಕ್ಕಮಗಳೂರು ಲೇೂಕಸಭಾ ಕ್ಷೇತ್ರ : ಸೇೂಲು ಗೆಲುವುಗಳ ಲೆಕ್ಕಾಚಾರ

ಕಾಯುವುದಕ್ಕಿಂತ ತಪವು ಬೇರೊಂದಿಲ್ಲ. ಈ ಮಾತು ಈ ಬಾರಿಯ ಉಡುಪಿ ಚಿಕ್ಕಮಗಳೂರು ರಾಜಕೀಯ ಪಕ್ಷದವರಿಗೂ, ಅಭ್ಯರ್ಥಿಗಳಿಗೂ ಮತದಾರರಿಗೂ ಹೇಳಿಸಿ ಮಾಡಿಸಿದಂತಿದೆ. ಕಾಯುವುದರಲ್ಲಿಯೂ ಒಂದು ಸುಖವಿದೆ, ಆನಂದವೂ ಇದೆ. ಏನೇ ಇರಲಿ ಈ ಬಾರಿ ಉಡುಪಿ  ಚಿಕ್ಕಮಗಳೂರು ಮತದಾರ ಯಾರ ಕೊರಳಿಗೆ ಕುಸುಮ ಮಾಲೆ ಹಾಕಬಹುದು ? ಅಥವಾ ಇದಾಗಲೇ ಹಾಕಿರಬಹುದು ಅನ್ನುವ ಲೆಕ್ಕಾಚಾರ  ಉಭಯ ಪಕ್ಷಗಳ ರಾಜಕೀಯ ಪಡಸಾಲೆಗಳಲ್ಲಿ ವಿವಿಧ ಆಯಾಮಗಳಲ್ಲಿ ಲೆಕ್ಕ ಹಾಕುತ್ತಿರುವುದಂತು ಸತ್ಯ. ಪ್ರತಿಯೊಬ್ಬರು ಅವರವರ ಪಕ್ಷ ಅಭ್ಯರ್ಥಿಗಳ ಪರ ಧನಾತ್ಮಕವಾಗಿ ಅಭಿಪ್ರಾಯ ಹೊರಹಾಕುತ್ತಿರುವುದು ಸಹಜ.

ಒಂದಂತೂ ಸತ್ಯ, ಈ ಬಾರಿ ಉಡುಪಿ ಚಿಕ್ಕಮಗಳೂರು ಲೇೂಕಸಭಾ ಕ್ಷೇತ್ರದಲ್ಲಿ ಬಿಜೆಪಿಯೂ ಗೆಲುವುದಿಲ್ಲ..! ಕಾಂಗ್ರೆಸ್ ಪಕ್ಷವೂ ಗೆಲುವುದಿಲ್ಲ..! ಹಾಗಾದರೆ ಗೆಲುವುದು ಯಾರಪ್ಪ? ನಿಖರವಾಗಿ ಹೇಳಬೇಕಾದರೆ ಈ ಬಾರಿ ಗೆಲ್ಲುವುದು ಅಥವಾ ಸೇೂಲುವುದು, ಹಿಂದುತ್ವ ಅರ್ಥಾತ್ ಮೇೂದಿ ಅಥವಾ ಗ್ಯಾರಂಟಿ ಅರ್ಥಾತ್ ಸಿದ್ದರಾಮಯ್ಯ ಅಥವಾ ಭಾವನಾತ್ಮಕತೆ ಯಾ ಅಭಿವೃದ್ಧಿ.‌ ವರ್ಚಸ್ಸು ಸರಳತೆ. ಇವಿಷ್ಟು ವಿಚಾರಗಳು ಮತದಾರರ ಮನದಾಳದಲ್ಲಿ ಪ್ರತಿನಿತ್ಯ ಚರ್ಚಿತವಾಗುತ್ತಿರುವ ಸೇೂಲು ಗೆಲುವಿನ  ಲೆಕ್ಕಾಚಾರಗಳು. ಅಂತೂ ಯಾರ ಬಾಯಿಯಲ್ಲೂ ಕಾಂಗ್ರೆಸ್, ಬಿಜೆಪಿ ಗೆಲ್ಲುವ ಹೆಸರೇ ಇಲ್ಲ.

ಹಾಗಾದರೆ ಮತದಾರರನ ಆಯ್ಕೆ ಏನಿರಬಹುದು? ಒಂದಂತೂ ಸತ್ಯ. 2019ರ ಫಲಿತಾಂಶ ಬಂದ ರೀತಿಯಲ್ಲಿ 2024ರ ಫಲಿತಾಂಶ  ಏಕಮುಖಿಯಾಗಿ ಖಂಡಿತವಾಗಿಯೂ ಬರುವುದಿಲ್ಲ. ಸೇೂಲು ಗೆಲುವುಗಳು ಕೇವಲ  ಅಲ್ಪ ಮತ ಮತಗಳಿಂದಲೇ ನಿರ್ಣಯವಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿ ಗೇೂಚರಿಸುತ್ತಿದೆ. ಈ ಬಾರಿ ಕ್ಷೇತ್ರ ಕ್ಷೇತ್ರಕ್ಕೂ  ಮತದಾರರ ಮೂಡ್ ಬದಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಲೆಕ್ಕಾಚಾರದ ಸಮೀಕ್ಷೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಿಂದುತ್ವಕ್ಕೆ ಮಣೆಗಳು ಜಾಸ್ತಿ ಬಿದ್ದಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಗ್ಯಾರಂಟಿಗಳಿಗೆ ಹೆಚ್ಚಿನ ಮಣೆ ಬಿದ್ದಿರಬಹುದು ಅನ್ನುವುದು ಇನ್ನೊಂದು ಸೂಕ್ಷ್ಮ ಲೆಕ್ಕಾಚಾರ. ಕುಂದಾಪುರ ಬ್ರಹ್ಮಾವರ  ಕಡೆ ಜಾತಿ ವರ್ಚಸ್ಸಿಗೆ ಹೆಚ್ಚು ಶಾಲು ಹಾಸಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಉಡುಪಿ  ಕಾಪು ಕಡೆಯ ಒಂದಿಷ್ಟು ಕಮಿಟೆಡ್ ವೇೂಟರ್ಸ ಯಾರು ಏನೇ ಹೇಳಲಿ ಕಣ್ಣು ಮುಚ್ಚಿಕೊಂಡು ತಮ್ಮ ಚಿಹ್ನೆಯ ಗುಂಡಿಯನ್ನು ಗಟ್ಟಿಯಾಗಿ  ಒತ್ತಿದ್ದಾರೆ ಅನ್ನುವುದು ಕೂಡಾ ಅಷ್ಟೇ ಸತ್ಯ.

ಕಾರ್ಕಳದ ಹೊರ ವಲಯದಲ್ಲಿ ಅಭಿವೃದ್ಧಿಯ ಕಡೆಗೆ ಹೆಚ್ಚಿನ ನೇೂಟ ಬೀರಿದ್ದರೆ ಅದೇ ಕಾರ್ಕಳದ ಪುರವಾಸಿಗಳು ಹೆಚ್ಚಿನ ಮನಸ್ಸು  ಹಿಂದುತ್ವಕ್ಕೆ ಮಣಿದಿದೆ ಅನ್ನುವುದು ಇನ್ನೊಂದು ದೂರದ ಲೆಕ್ಕಾಚಾರ.

ಬಹುದೂರದ ಚಿಕ್ಕಮಗಳೂರು ಮತದಾರರು  ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಯ ಕಡೆ ನಗೆ ಬೀರಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಉಡುಪಿ ಕಡೆಯ ಹಿಂದುತ್ವದ  ಸಂಕಲನ ವ್ಯವಕಲನ  ಲೆಕ್ಕಾಚಾರವನ್ನು ಚಿಕ್ಕಮಗಳೂರಿನ ಅಭಿವೃದ್ಧಿ ವರ್ಚಸ್ಸಿನ ಲೆಕ್ಕಾಚಾರದ ಮತಗಳು  ಸರಿದೂಗಿಸಿದರೆ ಗೆಲ್ಲಬಹುದು ಅನ್ನುವ ಆಶಾಭಾವನೆಯಲ್ಲಿ ಅಭಿವೃದ್ಧಿ ಪರ ಚಿಂತಕರು ಇದ್ದಾರೆ.

ಒಟ್ಟಿನಲ್ಲಿ ಮೇೂದಿ ಹಿಂದುತ್ವ ಅಲೆಯನ್ನು ಸಿದ್ದರಾಮಯ್ಯನವರ ಗ್ಯಾರಂಟಿಯ ಜೊತೆಗೆ ಅಭಿವೃದ್ಧಿಯ ಮತಗಳು ಎಷ್ಟರ ಮಟ್ಟಿಗೆ  ಕಟ್ಟಿ ಹಾಕಬಹುದು ಅನ್ನುವುದು ಜಯಪ್ರಕಾಶ್ ಹೆಗ್ಡೆ ಮತ್ತು ಕೋಟ ಶ್ರೀನಿವಾಸ ಪೂಜಾರಿ  ಅವರ ಸೇೂಲು ಗೆಲುವಿನ ಭವಿಷ್ಯ ನಿಂತಿರುವುದಂತೂ ನೂರಕ್ಕೆ ನೂರು ಸತ್ಯ.

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!