Saturday, October 12, 2024

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ : ಅಖಿಲೇಶ್‌ ಯಾದವ್‌

ಜನಪ್ರತಿನಿಧಿ (ಲಖನೌ) : ಬಿಜೆಪಿಯ ಸ್ಥಿತಿ ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಇನ್ನಷ್ಟು ಹದಗೆಡಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು (ಶನಿವಾರ) ಹೇಳಿದ್ದಾರೆ.

13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆದ ಒಂದು ದಿನದ ನಂತರ ಅಖಿಲೇಶ್ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ.

ಏಪ್ರಿಲ್ 19 ರಂದು ಮೊದಲ ಹಂತದ ಮತದಾನದ ನಂತರ, ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ ಮತ್ತು ಸಮಾಜವಾದಿ ಪಕ್ಷ (ಎಸ್ಪಿ)ಸದಸ್ಯರಾಗಿರುವ ಇಂಡಿಯಾ ಮೈತ್ರಿಕೂಟ ಪ್ರಬಲವಾಗಿದೆ ಎಂದು ಅಖಿಲೇಶ್ ಯಾದವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರು.

ಎರಡನೇ ಹಂತದ ನಂತರ ತಮ್ಮ ಅಧಿಕೃತ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ ಉತ್ತರ ಪ್ರದೇಶ ಮಾಜಿ ಸಿಎಂ, ಮೊದಲ ಎರಡು ಹಂತಗಳಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಯಾವುದೇ ಮತಗಳನ್ನು ಪಡೆದಿಲ್ಲ ಮತ್ತು ಉಳಿದ ಹಂತಗಳಲ್ಲಿ ಬೂತ್ ಏಜೆಂಟ್‌ಗಳನ್ನು ಸಹ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮೊದಲ ಎರಡು ಹಂತದ ಮತದಾನದ ನಂತರ ಮುಂದಿನ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ. ಜನ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಅಖಿಲೇಶ್ ಯಾಗವ್ ವಾಗ್ದಾಳಿ ಮಾಡಿದ್ದಾರೆ.

ಸುದ್ದಿ ವಾಹಿನಿಯ ವರದಿಗಾರರೊಬ್ಬರು ಬಿಜೆಪಿ ಬೂತ್ ಏಜೆಂಟ್‌ನೊಂದಿಗೆ ಮಾತನಾಡುವ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ಎಸ್‌ಪಿ ಮುಖ್ಯಸ್ಥರು, “ಬಿಜೆಪಿ ನಾಯಕರ 10 ವರ್ಷಗಳ ಸುಳ್ಳಿನ ನಂತರ, “ಬಿಜೆಪಿಯ ಬೂತ್ ಏಜೆಂಟ್” ಪಕ್ಷದ ಕಳಪೆ ಸ್ಥಿತಿಯ ಬಗ್ಗೆ ಸತ್ಯವನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

https://x.com/yadavakhilesh/status/1784067198526644377?t=px7LSNfuh5x7PK1Dt5qvlw&s=08

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!