Tuesday, October 8, 2024

ಬೈಂದೂರು ಮಂಡಲ ಬಿಜೆಪಿ: ಎ.27ರಂದು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಕಾರ್ಯಾಗಾರ

ಬೈಂದೂರು: ಬೈಂದೂರು ಮಂಡಲ ಬಿಜೆಪಿ ವತಿಯಿಂದ ಏಪ್ರಿಲ್ 27ರಂದು ವಿವಿಧ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಪೇಜ್ ಪ್ರಮುಖರ ಕಾರ್ಯಾಗಾರ ನಡೆಯಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಬೇಕು ಎನ್ನುವ ಸಂಕಲ್ಪದೊಂದಿಗೆ ಹಲವು ರೀತಿಯ ಪ್ರಚಾರ ಪ್ರಕ್ರಿಯೆ ಬಿರುಸಾಗಿ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಎಲ್ಲ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆಯು ಎ.27ರ ಬೆಳಗ್ಗೆ ನಡೆಯಲಿದೆ.

ಎಲ್ಲೆಲ್ಲಿ ಕಾರ್ಯಾಗಾರ?
ಶಿರೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10.30ಕ್ಕೆ ಮಾತಾಶ್ರೀ ಸಭಾ ಭವನದಲ್ಲಿ ನಡೆಯಲಿದ್ದು, ಮಾಜಿ ಶಾಸಕ ರಘುಪತಿ ಭಟ್ ಹಾಗೂ ಯತೀಶ್ ಅವರು ಭಾಗವಹಿಸಲಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10.30ಕ್ಕೆ ರಾಜರಾಜೇಶ್ವರಿ ಸಭಾ ಭವನದಲ್ಲಿ ನಡೆಯಲಿದ್ದು ವಿಭಾಗ ಪ್ರಭಾರಿ ರಾಜೇಶ್ ಕಾವೇರಿ ಮತ್ತು ದಿನಕರ ಬೆಳ್ತಂಗಡಿ ಪಾಲ್ಗೊಳ್ಳಲಿದ್ದಾರೆ.

ಕೊಲ್ಲೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10.30ಕ್ಕೆ ಯಡ್ತರೆ ಬಂಟರ ಭವನದಲ್ಲಿ ನಡೆಯಲಿದ್ದು ಕ್ಷೇತ್ರ ಉಸ್ತುವಾರಿ ಅಶೋಕ್ ಮೂರ್ತಿ ಮತ್ತು ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಭಾಗವಹಿಸಲಿದ್ದಾರೆ.

ಕಂಬದಕೋಣೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10.30ಕ್ಕೆ ನಾಗೂರಿನ ಲಲಿತ ಕೃಷ್ಣ ಕಲಾಮಂದಿರದಲ್ಲಿ ನಡೆಯಲಿದ್ದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಭಾಗವಹಿಸಲಿದ್ದಾರೆ.

ತ್ರಾಸಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10.30ಕ್ಕೆ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆಯಲಿದ್ದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಬಾಲಚಂದ್ರ ಭಟ್ ಭಾಗವಹಿಸಲಿದ್ದಾರೆ.

ವಂಡ್ಸೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10ಕ್ಕೆ ಸಕಲ ಸಭಾಭವನದಲ್ಲಿ ನಡೆಯಲಿದ್ದು, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹಾಗೂ ರಾಘವೇಂದ್ರ ಉಪ್ಪುಂದ ಪಾಲ್ಗೊಳ್ಳಲಿದ್ದಾರೆ.

ಸಿದ್ದಾಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10ಕ್ಕೆ ರಂಗನಾಥ ಸಭಾ ಭವನದಲ್ಲಿ ನಡೆಯಲಿದ್ದು, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಹಾಗೂ ಸೀತಾರಾಮ ಭರಣ್ಯ ಭಾಗವಹಿಸಲಿದ್ದಾರೆ.

ಕಾವ್ರಾಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಪೇಜ್ ಪ್ರಮುಖರ ಸಭೆ ಬೆಳಗ್ಗೆ 10ಕ್ಕೆ ಶೇಷಕೃಷ್ಣ ಸಭಾ ಭವನದಲ್ಲಿ ನಡೆಯಲಿದ್ದು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಮತ್ತು ಅಣ್ಣಪ್ಪ ಅವರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಬೈಂದೂರು ಮಂಡಲ ಬಿಜೆಪಿ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!