spot_img
Friday, April 25, 2025
spot_img

ಎ.27ಕ್ಕೆ ಕಿರಿಮಂಜೇಶ್ವರದಲ್ಲಿ ನಡೆಯುವ ಬಿಜೆಪಿ ಯುವ ಸಮಾವೇಶಕ್ಕೆ ಸಂಸದ ತೇಜಸ್ವಿ ಸೂರ್ಯ

ಬೈಂದೂರು: ಬೈಂದೂರು ಮಂಡಲ ಯುವಮೋರ್ಚಾ ಸಮಾವೇಶವು ಏಪ್ರಿಲ್ 27ರ ಮಧ್ಯಾಹ್ನ 2 ಕ್ಕೆ ಕಿರಿಮಂಜೇಶ್ವರದಲ್ಲಿ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಯುವಮೋರ್ಚಾ ಕಾರ್ಯಕರ್ತರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಯುವಮೋರ್ಚಾ ಸಮಾವೇಶವನ್ನು ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷರೂ ಆದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಉದ್ಘಾಟಿಸಿ, ಮುಖ್ಯ ಭಾಷಣ ಮಾಡಲಿದ್ದಾರೆ. ಚುನಾವಣೆಯಲ್ಲಿ ಯುವ ಮೋರ್ಚಾದ ಕಾರ್ಯ, ಯುವ ಜನತೆಯ ಉತ್ಸಾಹ, ದೇಶದಲ್ಲಿ ಕಳೆದ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯವನ್ನು ವಿವರಿಸಲಿದ್ದಾರೆ.

‘ಬೂತ್ ಕಡೆಗೆ ಸಮೃದ್ಧ ನಡಿಗೆ’ ಸಮಾರೋಪ:
ಯುವ ಮೋರ್ಚಾ ಸಮಾರೋಪ ಮುಗಿದ ನಂತರ ಅದೇ ವೇದಿಕೆಯಲ್ಲಿ ಶಾಸಕರಾದ ಗುರುರಾಜ ಗಂಟಿಹೊಳೆಯವರು ರೂಪಿಸಿ, ಅನುಷ್ಠಾನಗೊಳಿಸಿದ ಯಶಸ್ವಿ ಕಾರ್ಯಕ್ರಮವಾದ ‘ಬೂತ್ ಕಡೆಗೆ ಸಮೃದ್ಧ ನಡೆಗೆ’  ಸಮಾರೋಪವು ನಡೆಯಲಿದೆ. ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರು ಭಾಗವಹಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ ಶಾಸಕರಾದ ಗುರುರಾಜ ಗಂಟಿಹೊಳೆಯವರು ‘ಬೂತ್ ಕಡೆಗೆ ಸಮೃದ್ಧ ನಡೆಗೆ’ ಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಜಿಲ್ಲಾ ಹಾಗೂ ಮಂಡಲ ಬಿಜೆಪಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!