spot_img
Thursday, December 5, 2024
spot_img

ಸಮಾಜಸೇವಕ ಆನಂದ್.ಸಿ.ಕುಂದರ್‌ರವರ 76ನೇ ವರ್ಷೋತ್ಸವ, ಅನಾಥಾಶ್ರಮಕ್ಕೆ ಕೊಡುಗೆ

ಕೋಟ: ಆನಂದ್ ಸಿ ಕುಂದರ್ ರವರ ವ್ಯಕ್ತಿತ್ವವೇ ವಿಶಿಷ್ಟವಾದದ್ದು ಅವರು ಸಾಮಾಜಿಕ,ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಪಾಂಡೇಶ್ವರ ರಕ್ತೇಶ್ವರಿ ದೇಗುಲ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ನುಡಿದರು.

ಗುರುವಾರ ತನ್ನ 76ನೇ ವರ್ಷೋತ್ಸವ ಆಚರಿಸಿಕೊಳ್ಳುತ್ತಿರುವ ಸಮಾಜಸೇವಕ ಆನಂದ್ ಸಿ ಕುಂದರ್ ರವರ ಹುಟ್ಟುಹಬ್ಬವನ್ನು ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಶ್ರಮಕ್ಕೆ ಹಣ್ಣು ಹಂಪಲು,ಬಟ್ಟೆಪರಿಕರ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದಲ್ಲಿ ಸೌಮ್ಯ ಸ್ವಭಾವದಲ್ಲಿ ಜನಸಾಮಾನ್ಯರ ನಾಡಿಮಿಡಿತಗಳಿಗೆ ಸ್ಪಂದಿಸುವ ಅವರ ಗುಣ ಶ್ರೇಷ್ಠವಾದದ್ದು ,ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಅಪ್ಪ ಅಮ್ಮ ಅನಾಥಾಶ್ರಮ ಅಶಕ್ತರ ಬಾಳಿಕೆ ಬೆಳಕ ಚೆಲ್ಲುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.

ಈ ಸಂದರ್ಭದಲ್ಲಿ ಅಪ್ಪ ಅಮ್ಮ ಅನಾಶ್ರಮಕ್ಕೆ ಹಣ್ಣು ಪರಿಕರ ಹಸ್ತಾಂತರಿಸಲಾಯಿತು.ಈ ವೇಳೆ ಅನಾಥಾಶ್ರಮದಲ್ಲಿದ್ದವರು ಹಾಗೂ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಶುಭಹಾರೈಕೆ ಸಲ್ಲಿಸಲಾಯಿತು.

ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಅಪ್ಪ ಅಮ್ಮ ಅನಾಥಾಶ್ರಮದ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು. ಮಹಿಳಾಮಂಡಲದ ಪ್ರದಾನಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು.ಕಾರ್ಯದರ್ಶಿ ಶಕೀಲ ವಂದಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!