Saturday, October 12, 2024

ಬೆಳ್ವೆ: ಪುರಾಣ ಪ್ರಸಿದ್ದ ಕ್ಷೇತ್ರ ಶ್ರೀ ಶಂಕರನಾರಾಯಣ ದೇವಸ್ಥಾನದ ರಥೋತ್ಸವ ಸಂಪನ್ನ

ಜನಪ್ರತಿನಿಧಿ (ಬೆಳ್ವೆ) : ಪುರಾಣ ಪ್ರಸಿದ್ದ ಕ್ಷೇತ್ರ ಶ್ರೀ ಶಂಕರನಾರಾಯಣ ದೇವಸ್ಥಾನ ಇಲ್ಲಿ ಪ್ರತಿವರ್ಷ ನಡೆಯುವ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮವು ೨೩ರ ಸೋಮವಾರದಂದು ಬಹಳ ವಿಜಂಬ್ರಣೆಯಿಂದ ನಡೆಯಿತು.

ದೇವಳದಲ್ಲಿ ೧೯ರಿಂದ ೨೬ರತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ನಡೆಯಿತು. ದೇವಳದಲ್ಲಿ ಮೂಹೂರ್ತ ಬಲಿ ಅಂಕುರಾರ್ಪಣಮ್, ದ್ವಜಾರೋಹಣ, ಭೇರಿತಾಡಣ, ಕೌತುಕ ಬಂಧನ, ವಾಹನೋತ್ಸವ, ರಂಗಪೂಜೆ ಹೊರೆಕಾಣಿಕೆ ಸಮರ್ಪಣೆ ಕಟ್ಟೆಪೂಜೆ, ಮಹಾರಂಗಪೂಜೆ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.

ದಿನಾಂಕ ೨೩ರಂದು ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ವಿಸರ್ಜನೆ ತುಲಾಭಾರ ಮಹಾಪ್ರಸಾದ ವಿತರಣೆ ಚೂಣೋತ್ಸವ,ಅವಭೃತಸ್ನಾನ ದ್ವಜಾರೋಹಣ, ಕೆಂಡೋತ್ಸವ ಸಂಪ್ರೋಕ್ಷಣೆ ಗಣಯಾಗ ಮಹಾ ಅನ್ನ ಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ದೇವಳದ ತಂತ್ರಿಗಳು, ಕುಟುಂಬಸ್ಥರು ಪವಿತ್ರ ಪಾಣಿ , ಆಡಳಿತ ಮುಕ್ತೇಸರರು, ಹಾಗೂ ಊರಿನ ಸಮಸ್ತ ಮುಕ್ತೇಸರರು  ಹಾಗೂ ಸಾವಿರಾರು ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಂಡರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!