spot_img
Friday, March 21, 2025
spot_img

ಮುಂದಿನ ಸರ್ಕಾರ ʼಕೆಲವು ಬಿಲಿಯನೇರ್ʼ ಅಥವಾ ʼ140 ಕೋಟಿ ಭಾರತೀಯರದ್ದುʼ ಎಂಬುವುದನ್ನು ನಿಮ್ಮ ಮತ ನಿರ್ಧರಿಸಲಿದೆ : ರಾಗಾ

ಜನಪ್ರತಿನಿಧಿ (ನವ ದೆಹಲಿ) : ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ಮತ ಚಲಾಯಿಸುವಂತೆ ಜನರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿನಂತಿಸಿಕೊಂಡಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ದೇಶದ ಮತದಾರರನ್ನು ವಿನಂತಿಸಿಕೊಂಡ ರಾಗಾ,ʼಪ್ರೀತಿಯ ದೇಶದ ನಿವಾಸಿಗಳೇ, ಇಂದು ದೇಶದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಮುಂದಿನ ಸರ್ಕಾರ ʼಕೆಲವು ಬಿಲಿಯನೇರ್ʼ ಅಥವಾ ʼ140 ಕೋಟಿ ಭಾರತೀಯರದ್ದುʼ ಎಂಬುವುದನ್ನು ನಿಮ್ಮ ಮತ ನಿರ್ಧರಿಸುತದೆ. ಆದ್ದರಿಂದ ಎಲ್ಲರೂ ಮನೆಯಿಂದ ಹೊರಗೆ ಬಂದು ʼಸಂವಿಧಾನ ಯೋಧʼ ಆಗುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ಮತ ಹಾಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಕದ ಹದಿನಾಲ್ಕು ಕ್ಷೇತ್ರಗಳು ಸೇರಿದಂತೆ ಹದಿಮೂರು ರಾಜ್ಯಗಳ ಎಂಬತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ಇಂದು(ಶುಕ್ರವಾರ) ಮತದಾನ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಣದಲ್ಲಿದ್ದು, ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

https://x.com/RahulGandhi/status/1783678058940997723

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!