spot_img
Tuesday, February 18, 2025
spot_img

ಟಿಎಂಸಿ ಅಧಿಕಾರದಲ್ಲಿ ಕೋಟ್ಯಾಂತರ ರೂ. ಹಗರಣ : ಮೋದಿ ಆರೋಪ

ಜನಪ್ರತಿನಿಧಿ (ಮಾಲ್ಡಾ ) : ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಸುಮಾರು ಇಪ್ಪತ್ತಾರು ಕುಟುಂಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಇಂದು (ಶುಕ್ರವಾರ) ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ರಾಜ್ಯದ ಯುವಜನತೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಟಿಎಂಸಿ ನಾಯಕರಿಗೆ ಲಂಚ ನೀಡಲು ಸಾಲ ಪಡೆದ ಆಕಾಂಕ್ಷಿಗ್ಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿಎಂಸಿ ಹಗರಣದಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ಯುವಜನತೆಯ ಭಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿಯ ಹಗರಣ ಮಾತ್ರ ಅಸ್ತಿತ್ವದಲ್ಲಿದೆ. ಟಿಎಂಸಿ ವಿರುದ್ಧ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಸಿಎಎ ಯಾವುದೇ ಪ್ರಜೆಯ ಪೌರತ್‌ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಹಾಗೂ ಟಿಎಂಸಿ ಪಕ್ಷಗಳ ನಡುವೆ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ನಿಮ್ಮ ಸಂಪತ್ತನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ಬಯಸುತ್ತಿದೆ. ಆದರೆ ಇದನ್ನು ಟಿಎಂಸಿ ವಿರೋಧಿಸುತ್ತಿಲ್ಲ. ಬಾಂಗ್ಲಾದೇಶದ ನುಸುಳುಕೋರರಿಗೆ ನೆಲೆ ಒದಗಿಸಲು ರಾಜ್ಯ ಸರ್ಕಾರ ಬಯಸುತ್ತಿದೆ. ಅಂತವರಿಗೆ ಸಂಪತ್ತು ಹಂಚಿಕೆ ಬಗ್ಗೆ ಕಾಂಗ್ರೆಸ್‌ ಮಾತನಾಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!