spot_img
Tuesday, March 31, 2026
spot_img

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಶೇ. 30.98 ರಷ್ಟು ಮತದಾನ !

ಜನಪ್ರತಿನಿಧಿ (ಮಂಗಳೂರು) : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಮತದಾನದ ರಂಗು ಏರಿದೆ.  ಕರ್ನಾಟಕದಲ್ಲಿ ಇಂದು(ಶುಕ್ರವಾರ) ಮೊದಲನೇ ಹಂತದ ಮತದಾನದಲ್ಲಿ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಆ ಪೈಕಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಮತದಾನ ಪ್ರಕ್ರಿಯೆಯೂ ಬಿರುಸಾಗಿ ನಡೆಯುತ್ತಿದೆ.

ಹಿಂದುತ್ವದ ಭದ್ರಕೋಟೆ ಎಂದು ಬಿಂಬಿತವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಈ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದ್ದು, ಕ್ಷೇತ್ರದಲ್ಲಿ ಮತದಾನದ ಕಾವು ಏರಿದೆ. ಜಾತಿ ಮತಗಳ ಲೆಕ್ಕಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಉಭಯ ರಾಷ್ಟ್ರೀಯ ಪಕ್ಷಗಳು ಮತ ಪ್ರಚಾರ ಮಾಡಿ ಚುನಾವಣೆಯನ್ನು ಇಂದು ಎದುರಿಸುತ್ತಿವೆ. ಬಿಜೆಪಿಯಿಂದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹಾಗೂ ಕಾಂಗ್ರೆಸ್‌ನಿಂದ ಪದ್ಮರಾಜ್‌ ಆರ್‌ ಪೂಜಾರಿ ನಡುವೆ ಬಾರಿ ದೊಡ್ಡ ಮಟ್ಟ ಪೈಪೋಟಿ ಎದುರಾಗಿದ್ದು, ಮತದಾರ ಯಾರಿಗೆ ಒಲಿಯುತ್ತಾನೆ ಎಂದು ಕಾದು ನೋಡಬೇಕಿದೆ.

ಈವರೆಗಿನ ಒಟ್ಟು ಮತ ಪ್ರಮಾಣ :

ಬಂಟ್ವಾಳ  – ಶೇ. 32.28

ಬೆಳ್ತಂಗಡಿ  – ಶೇ. 32.39

ಮಂಗಳೂರು – ಶೇ. 31.63

ಮಂಗಳೂರು ನಗರ ಉತ್ತರ – ಶೇ. 30.39

ಮಂಗಳೂರು ನಗರ ದಕ್ಷಿಣ – ಶೇ. 26.54

ಮೂಡುಬಿದಿರೆ -ಶೇ. 27.46

ಪುತ್ತೂರು – ಶೇ. 32.98

ಸುಳ್ಯ – ಶೇ. 34.91

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!